ಮನದ ಬೆಳಕೆಂದೂ ಮಂಕಾಗದು, ಮಾಸದು
ಮನದ ಬೆಳಕೆಂದೂ ಮಂಕಾಗದು, ಮಾಸದು
ಬಾಳದಿರು ಕಂದ ನೀ ಭಯದಿ
ಮಂಕಾಗದೆಂದು ಬೆಳಕು ಮನದಿ
ಎತ್ತರಕ್ಕೆ ನಿಲ್ಲು ನೀ ಜಗದಿ
ಎಲ್ಲರೂ ಈಗ ನಿನ್ನ ಕೆಳಗೆಂಬ ವಿಶ್ವಾಸದಿ
ಕನಸು ನನಸಾಗದೆಂದು ಯೋಚಿಸದಿರು
ಎಲ್ಲದಕ್ಕೂ ಸಮಯವಿದೆ, ಕಾಯುತಿರು
ಎಲ್ಲ ಬಾಗಿಲು ಮುಚ್ಚಿದವೆಂದು ಬೆದರದಿರು
ಮನದಲ್ಲೊಂದು ಬೆಳಕಿದೆ ಮಂಕಾಗದಿರು
ಇದೊಂದಂತೂ ಸತ್ಯ
ಮನದ ಬೆಳಕೆಂದೂ ಮಂಕಾಗದು, ಮಾಸದು
