STORYMIRROR

mamta km

Classics Inspirational Others

4  

mamta km

Classics Inspirational Others

ಮಲೆನಾಡ ಮನೆಗಳಲಿ.

ಮಲೆನಾಡ ಮನೆಗಳಲಿ.

1 min
316

ಮಲೆನಾಡಿನ ಮನೆಯ ಒಳಗಡೆ ಇದೆ ನೀರವ ಮೌನ, 

ದೇವರ ಮನೆಯ ದೀಪ ಹೊಯ್ದಾಡಿ ನಿಟ್ಟುಸಿರಿಟ್ಟಿದೆ, 

ಬಾಗಿಲಿನ ಹಲಸು ಮಾವಿನ ತೋರಣ ಒಣಗಿ ಹೋಗಿದೆ, 

ಒಳ ಹೊರಗೆ ಆಡುವ ಪುಟ್ಟ ಮಕ್ಕಳಿಲ್ಲದೆ ಮನೆ ಬಣಗುಟ್ಟಿದೆ.


ಹಿರಿಯ ಜೀವಗಳು ಕೆಲಸ ಮುಗಿಸಿ, ಸೂರನ್ನು ದಿಟ್ಟಿಸಿವೆ, 

ಕೊಟ್ಟಿಗೆಯ ಕರುವಿನ ಅಂಬಾ ಎಂಬ ಕರೆ, ಇಹದೆಡೆಗೆ ಸೆಳೆದಿದೆ,

ಹುಲ್ಲು ನೀರನ್ನಿಟ್ಟಕರಗಳು ಅವುಗಳ ಬೆನ್ನ ಸವರಿದೆ.

ನಾವಿಲ್ಲಿ ಇದ್ದೇವೆ ಎಂಬಂತೆ ನಾಯಿ ಬೆಕ್ಕುಗಳು,

ಕಾಲ ಬಳಿ ಸುಳಿದಾಡಿದೆ.


ಮಕ್ಕಳ ಕರೆ ಬರಬಹುದು ಎಂದು ಆಸೆಯಲಿ 

ಜೀವಗಳು ಎದುರು ನೋಡುತ್ತಿವೆ, 

ಮೊಮ್ಮಕ್ಕಳ ಆಟ ಪಾಠವ ಚರವಾಣಿಯಲ್ಲಿ, 

ನೋಡಲು ಕಾತರಿಸಿದೆ, 

ರಜೆಯ ದಿನಗಳಲಿ ಮಕ್ಕಳು ಊರಿಗೆ ಬರುವರೆಂದು, 

ಹಪ್ಪಳ ಉಪ್ಪಿನಕಾಯಿ ತಯಾರಾಗುತ್ತಿದೆ, 


ಸಂಜೆ ಆಯಿತು ಮತ್ತೆ ಹಕ್ಕಿಗಳು ಮರಳುತಿರುವವು ಮನೆಗೆ,

 ಅದನ್ನು ನೋಡುತ್ತಾ ಹಿರಿ ಜೀವಗಳು, 

ಗೂಡು ಬಿಟ್ಟ ತಮ್ಮ ಒಡಲ ಕುಡಿಗಳ ನೆನೆದು

ಬಿಸಿಯಾದ, ಉಸಿರನ್ನು ತಡೆ ಹಿಡಿದಿದೆ, 

ಮಲೆನಾಡ ಮನೆಗಳಲಿ ನಿಶ್ಯಬ್ದ, ನೀರವತೆ, 

ಕಳೆದು, ಕಾಲ್ಗೆಜ್ಜೆ ಸದ್ದು ಕೇಳಲು ಮನ ಕಾತರಿಸಿದೆ.


Rate this content
Log in

Similar kannada poem from Classics