ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ
ಭಾರತ ದೇಶದಲ್ಲಿ ಉದಯಿಸಿದ ಮಹಾತ್ಮ
ಇವರಲ್ಲಿ ಕಂಡರು ಭಾರತೀಯರು ಪರಮಾತ್ಮ
ಶಾಂತಿ ಮಾರ್ಗವೇ ಇವರ ಸೂತ್ರ
ಸ್ವಾತಂತ್ರ್ಯ ಹೋರಾಟದಲ್ಲಿ ಹಿರಿದು ಇವರ ಪಾತ್ರ
ಭಾರತೀಯರ ಒಗ್ಗಟ್ಟಿಗೆ ಪ್ರಯತ್ನಿಸಿದ ವೀರ
ಸತ್ಯಾಗ್ರಹ ಅಹಿಂಸೆಯ ಮಾರ್ಗವನ್ನು ಅನುಸರಿಸಿದ ಧೀರ
ಭಾರತೀಯರ ಹೃದಯ ಸಿಂಹಾಸನ ಗೆದ್ದ ಬಾಪು
ಎಂದೆಂದಿಗೂ ಹಸಿರು ನಿಮ್ಮ ಸವಿನೆನಪು
ಜೀವನದುದ್ದಕ್ಕೂ ಸಾಲು ಸಾಲು ಹೋರಾಟ
ನೀವು ಇರುವಾಗಲೇ ಕೊನೆಯಾಯಿತು ಬ್ರಿಟಿಷರ ಆಟ
ಧ್ವನಿಯಾದರಿ ಇಲ್ಲಿನ ಸಾಮಾನ್ಯ ಜನರಿಗೂ
ನಿಮ್ಮ ನೆನೆಯುವುದು ಮನ ಉಸಿರು ಇರುವವರೆಗೂ
