ಲೆಕ್ಕವಿರದ ಗಳಿಗೆ.....
ಲೆಕ್ಕವಿರದ ಗಳಿಗೆ.....
ಲೆಕ್ಕವಿರದ ಗಳಿಗೆಗೆ
ನಾನೊಂದು ಲೆಕ್ಕವಿಡಲೇ ಎಂದವ
ಕಣ್ಣೆತ್ತಿ ನಕ್ಕವನ ಕಂಡಷ್ಟೇ ಹೊತ್ತು
ಸೀಮೆಗಿರದ ನರಪೇತಲ
ಅಡಿಕೆಮರ ಹತ್ತಲಾಗದೇ
ಎದೆಯುಸಿರು ಬಿಟ್ಟವನೀತ
ಅಯ್ಯೋ... ಏನ್ ಗ್ರಹಚಾರವೋ
ನತ್ತತೊಟ್ಟವಳ ಹುಡುಕುತ
ಗಾಜಿನ ಬಳೆಗಳ ಸದ್ದ ಆಲಿಸುತ
ಊರುಕೇರಿ ಅಲದಾತು
ಮೈಕೈತುಂಬಿಕೊಂಡವರೆದುರು
ದೃಷ್ಟಿ ಬೊಂಬೆಯಂತೆ
ಪಾಪ...ಕೂಸಿಗೆ ಒಪ್ಪಿಗೆಯಾಗದೆ
ಮದುವೆ ಮಾಡ್ವರಾರು?
ಏನೋ ಸುಮಾರಿಗೆ ಒಂದು ಒಲಿದಿತ್ತು
ಅದೂ ಕೈ ತಪ್ಪಿತೆಂಬ ಭಯ!
ಒಂದಕ್ಕೊಂದು ಬೆಸೆದ ಗಳಿಗೆ
ನೊಂದವಗೆ ಬೆಂದವರೆಂದು
ಸೋತು ನಿಂತವಳಿಗೆ
ನಾನೊಂದು ಆಸರೆಯಷ್ಟೇ
ಆಟಕ್ಕುಂಟು ಲೆಕ್ಕಕ್ಕಿಲ್ಲ
ಲೆಕ್ಕದಲ್ಲಿ ನಾನು ಹುಷಾರು
ಪಕ್ಕದಲ್ಲಿ ನೀ ಇರಲು....