Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

ಶಿವಲೀಲಾ ಹುಣಸಗಿ

Classics Inspirational Others

4  

ಶಿವಲೀಲಾ ಹುಣಸಗಿ

Classics Inspirational Others

ಗುರುಭ್ಯೋ ನಮಃ

ಗುರುಭ್ಯೋ ನಮಃ

1 min
360


ಹರ ಮುನಿದರೆ ಗುರು ಕಾಯ್ವ

ಮನದಲವಿತ ಕಾರ್ಮೋಡಕೆ

ತಂಪೆರೆದು ಧರೆ ತಣ್ಣಗಿರಿಸುವ

ಅಜ್ಞಾನದ ಕತ್ತಲೆಯ ಕಳೆವಾತ

ಜ್ಞಾನ ದೀವಿಗೆಯ ಬೆಳಗುವಾತ

ದೇಹ ದಂಡನೆಯ ಮಹತ್ವ

ಸರಿ-ತಪ್ಪುಗಳ ಅರ್ಥ ಕಲಿಸಿದಾತ

ತಾಯಿ ತಂದೆಯರು ದೈವವೆಂದಾತ

ಮೂರು ಲೋಕಕ್ಕೂ ಗುರುವೆಂದಾತ

ಜನನಿಗಾವ ದೋಷ?

ಮನಕಾವ ಮೋಹ?

ಪಿತೃಗಾವ ಭಾವ?

ಒಂದಕ್ಷರ ಕಲಿಸಿದಾತಂ ಗುರು!

ಬದುಕ ಕಲಿಸುವಾತ ಗುರು

ಸಂಕಷ್ಟದ ಸರಮಾಲೆಯಲಿ

ನೊಂದು ಬೆಂದರೂ ಸಲಹುವಾತ

ಗುರು ನಿಂದೆ ಮಹಾಪಾಪ!

ಜಗತ್ತನ್ನು ನೋಡುವ ಕಲೆ ಸೃಷ್ಟಿಸಿ

ಸೃಜನಶೀಲೆಯ ಮೇಳೈಸಿದಾತ

ಗುರು ಜಗದ್ಗುರು ಮರೆಯಬೇಡ

ಜೀವನಕೆ ಮಾರ್ಗದರ್ಶನವಿತ್ತಾತ

ಜೀವಂತಿಕೆಗೆ ಮರುಜೀವ ನೀಡಿದಾತ

ಸಕಲ ಸಂಕಟಹರ ಗುರು

ಗುರುಭ್ಯೋ ನಮಃ



Rate this content
Log in

Similar kannada poem from Classics