STORYMIRROR

Ranjitha M

Classics Inspirational Others

4  

Ranjitha M

Classics Inspirational Others

ಕವಿತೆ ಎಂದರೇನು

ಕವಿತೆ ಎಂದರೇನು

1 min
276

ಕವಿತೆ ಎಂದರೆ

ಅದು ಬರಿ ಪದಗಳ ಸಾಲಲ್ಲ

ಮನದ ಭಾವಗಳ ಗೊಂಚಲು

ಒಮ್ಮೆಮ್ಮೆ ಸಿಹಿ ಮತ್ತೊಮ್ಮೆ ಕಹಿ

ಮಗದೊಮ್ಮೆ ಸಿಹಿ ಕಹಿಗಳ ಸಮ್ಮಿಲನ


ಸಾಲುಗಳ ಮದ್ಯ ಬೆರೆತ ಪದಗಳು

ಹೊಂದಾಣಿಕೆಯಿಂದ ಜೋಡಿಯಾಗಿ

ನವರಸಗಳ ಪುಂಜಗಳ ಜೊತೆಗೂಡಿಸಿ

ಹವಳದ ಮಾಲೆಯಂತೆ ಮಿಂಚುವವು


ಬಾವಾರ್ಥಗಳನು ಜೊತೆಗೂಡಿಸಿ

ಅನುರಾಗವ ಬೆರೆಸಿ ಪ್ರತಿ ಅಕ್ಷರದಿ

ಹೊಸೆಯಲು ಕವನ ಒಂದನು

ಓದುತಿರೆ ನವ ಲೋಕದ ಸೃಷ್ಟಿ


ಕವಿತೆ ಎಂದರೆ

ಕವಿಯ ಮನದ ಪ್ರತಿಬಿಂಬ

ಭಾವಗಳ ಬತ್ತದ ಬಿಂದು

ಕಾರಣಗಳು ಬೇಡ ಕವನ ಹುಟ್ಟಲು.



Rate this content
Log in

Similar kannada poem from Classics