STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational

2  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational

ಕಥನ-ಕವನ‌:- ಹೋಳಿ ಹೋಳಿ

ಕಥನ-ಕವನ‌:- ಹೋಳಿ ಹೋಳಿ

1 min
128

ಬಣ್ಣದ ರಂಗಿನಾಟವ ಈ ಹೋಳಿ

ಸಪ್ತ ಬಣ್ಣಗಳಲಿ ನಲಿದಾಡುವ ಹೋಳಿ

ಭೇಧ ಭಾವ ಮರೆಸುವ‌ ಈ ಹಬ್ಬ

ಎಲ್ಲರೂ ಸೇರಿ ಆಚರಿಸುವ ಹೋಳಿ


ಫಾಲ್ಗುಣ ಮಾಸದ ಸಂಭ್ರಮ ಓಕುಳಿ

ಕಾಮನ ಸುಡುವ ಆರಂಭ ಈ ಹಬ್ಬ

ಪುರಾಣದ ಹಿನ್ನಲೆಯುಂಟು ಈ ಹಬ್ಬ

ತಿಳಿಯುತ ಆಡುವ‌ ಈ ಹೋಳಿ


ತಾರಕಾಸುರ ತಪವ ಮಾಡುತಲಿ

ಬ್ರಹ್ಮ ಮೆಚ್ಚಿ ಬಂದನು ಧರೆಯಲಿ

ಮೃತ್ಯುಂಜಯನಾಗುವ ವರವ ಕೇಳುತಲಿ

ಸೃಷ್ಟಿಯ ವಿರುದ್ದ ಬ್ರಹ್ಮ ನಿರಾಕರಿಸುತಲಿ


ಹಸುಳೆ ಶಿವನಿಂದ ಮರಣ ಬರಲೆಂದು

ಬ್ರಹ್ಮನು ವರವ ಕೊಟ್ಟ ಆಗಲೆಂದು

ತ್ರಿಲೋಕದಿ ಮೆರೆದ ಅಟ್ಟಹಾಸದಿ ಅಂದು

ನನಗ್ಯಾರು ಸಮರಿಲ್ಲ ಈ ಜಗದಿ ಎಂದು


ದೇವತೆಗಳು ಧಾವಿಸಿದರು ಶಿವನಲಿ

ಜಟಾಧಾರಿ ಉಗ್ರ ತಪವ ಮಾಡುತಲಿ 

ಭಂಗ ಮಾಡುವರಾರೆಂದುಯೋಚಿಸುತಲಿ

ರತಿಪತಿ ಪ್ರದ್ಯುಮ್ನನೆಂದು ನಿರ್ಧರಿಸುತಲಿ


ಪ್ರದ್ಯುಮ್ನನು ಬಿಟ್ಟ ಹೂಬಾಣವನು

ಎಚ್ಚರಗೊಳ್ಳುತ ಬಿಟ್ಟನು ಕೆಂಗಣ್ಣನು

ಪ್ರದ್ಯುಮ್ನನು ಸುಟ್ಡು ಬೂದಿಯಾದನು

ವೃತ್ತಾಂತ್ತವೆ ಕಾರಣ ಕಾಮನ ಸುಡುವುದು


ಇನ್ನೋಂದು ಕಾರಣವ ಇರುವುದು

ಹಿರಣ್ಯ ಕಶ್ಯಪ್ಪ ಮಗನ ಕೊನೆಗಾಣಿಸಲು

ಸಹಾಯ ಪಡೆದನು ತಂಗಿ ಹೋಲಿಕೆಯಲಿ

ಇವಳು ವರವ ಪಡೆದಳು ಅಗ್ನಿಯಲಿ 


ಅತ್ತೆಯ ಪ್ರೀತಿಗೆ ಮರುಳಾದ ಪ್ರಲ್ಹಾದನು

ಅತ್ತೆ ಹೋಲಿಕೆ ಕುತಂತ್ರ ಅರೆಯದಾದನು

ತನ್ನ ಚಮತ್ಕಾರ ತೋರಿಸಲು ಕರೆದಳು

ಪ್ರಲ್ಹಾದನ ಜೊತೆ ಅಗ್ನಿ ಚಿತೆ ಏರಿದಳು


ಕೊಲ್ಲವರಿಗಿಂತ ಕಾಯುವದೇವರಿರುವನು

ಮುಗ್ದ ಪ್ರಲ್ಹಾದ ಭಕ್ತಿಗೆ ಓಡಿಬಂದನು

ಹೋಲಿಕೆಯು ಅಗ್ನಿಯಲಿ ಬೆಂದಳು

ವೃತ್ತಾಂತವು ಕಾರಣ ಕಾಮನ ಸುಡಲು


(ಹೋಳಿಯ ಪೌರಾಣಿಕಹಿನ್ನಲೆ ಕಾರಣ)


Rate this content
Log in

Similar kannada poem from Classics