ಕರುನಾಡ ರಾಜ್ಯಾಂಬೆಗೆ ಶರಣು
ಕರುನಾಡ ರಾಜ್ಯಾಂಬೆಗೆ ಶರಣು
ಜಯಜಯತು ಜಗದಂಬೆ ಕರುನಾಡ ರಾಜ್ಯಾಂಬೆ.
ನಿನ್ನಡಿಗೆ ಹಣೆಮಣೆದು ಸಾವಿರದ ಶರಣಂಬೆ.
ಸಂಪ್ರೀತಿ ಸೌಭಾಗ್ಯ ಭೂಸಿರಿಯ ಘನತೆ.
ಬೆಳಗಲಿ ಮನೆಮನದಿ ಕನ್ನಡದ ಹಣತೆ.!
ಕರುನಾಡು ಕಪ್ಪುನೆಲ ಜೀವಜಲ ಕಾವೇರಿ.
ಹಬ್ಬಿರುವ ಹಸಿರ ಸಿರಿ ಶ್ರೀಗಂಧ ಕಸ್ತೂರಿ.
ಮುಗಿಲೆತ್ತರ ತಲೆಯೆತ್ತಿವೆ ಸಹ್ಯಾದ್ರಿಯ ಶೃಂಗ.
ಕವಿಕೋಗಿಲೆಗಳೆ ಹಾಡಿವೆ ಸುಸ್ವರದ ರಾಗ.!
ಆಚಾರ್ಯ ಹರಿದಾಸರೇ ಹಾರೈಸಿದ ಕನ್ನಡ.
ಗತಕಾಲದ ಇತಿಹಾಸದಿ ಹೆಸರಾಗಿದೆ ಕನ್ನಡ.
ಸುಶೀಲ ಸಂಪನ್ನ ಸುಸಂಸ್ಕೃತದ ಕನ್ನಡ.
ರಸಿಕರಾಡುವ ನುಡಿಯೇ ಹೊನ್ನುಡಿ ಕನ್ನಡ.!
ಕರುನಾಡ ಕಾಶ್ಮೀರ ಕೊಡಗಿನ ಬೆಡಗಿಹುದು.
ಹರಿಹರರೆ ಶರಣಾದರು ಕರುನಾಡ ಸಿರಿಗೆ.
ಸಾವಿಲ್ಲದ ಸೌಂದರ್ಯ ಶಿಲ್ಪಕಲೆ ಅಡಗಿಹುದು.
ಜನಮನವೇ ಕುಣಿದಾಡಲಿ ಕನ್ನಡದ ಪರಿಗೆ.!
