STORYMIRROR

Surabhi Latha

Classics Inspirational Others

4  

Surabhi Latha

Classics Inspirational Others

ಕೃಷ್ಣ

ಕೃಷ್ಣ

1 min
325

ಏನು ಮಾಡಿದರೇನು ಹರಿಯ ಕಾಣದಿರೆ 

ಏನು ಪಟಿಸಿದರೇನು ಮಾಧವ ಆಲಿಸದಿರೆ 

ಅದೆಂತಹ ಪಾಪದ ಮೂಟೆ ಹೊತ್ತಿಹೆನೋ

ಕಲ್ಲಾಗಿ ಮೌನದಿ ನಿಂತಿಹೆ ಅಲುಗಾಡದೆ ನೀನು


ಕರುಣೆ ಇಂದ ಕರೆಯದೆ ಎನ್ನ ಬಾಳು ಬೆಳಗದು

ಅಪವಾದಗಳ ಭಾರವ ಹೊತ್ತು ಬದುಕೆನು

ಬಕುತಿಯಲಿ ಹುರುಳಿಲ್ಲ ನಿನ್ನಾಣೆ ಕೇಳೋ

ಭವ ಬಂದನಗಳ ಬಿಡಿಸಿ ಸಲಹೊ ಮುರಾರಿ


ಮನವೆಲ್ಲ ನೊಂದಿಹುದು, ಮುಳ್ಳುಗಳಂತೆ

ಹೃದಯದಲಿ ಭಯವುಂಟು ಏನೂ ಅರಿಯದೆ

ನಾನು ಏನೆಂದು ನೀನೇ ಬಲ್ಲೆ ಸ್ವಾಮಿ

ತಪ್ಪುಗಳನ್ನು ಒಪ್ಪ ಮಾಡೋ ದೊರೆಯೇ


ಕಲಿಯುಗವೊಂದು ಪಾಪಿಗಳ ಕೂಪವು 

ನಾವುಗಳೇನೋ ಸೂತ್ರದಾರವು

ದನಿಯ ಆಲಿಸಿ ಮುಕುತಿಯ ನೀಡೋ

ದೇವನಿರುವ ನಂಬಿಕೆಯ ಉಳಿಸೋ 



Rate this content
Log in

Similar kannada poem from Classics