STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಕರ್ನಾಟಕ

ಕರ್ನಾಟಕ

1 min
378

ಎಂತ ಸೊಬಗಿನ ನಾಡು 

ಸೊಬಗು ತುಂಬಿದ ನಾಡು 

ನಿನ್ನೊಲುಮೆ ಈ ನಾಡು ಕರ್ನಾಟಕ 

ಶೂರಧೀರರ ನಾಡು 

ಸಿರಿಗಂಧದಾ ಬೀಡು 

ಸಕಲ ಸಂಪದಗಳಾ ನಾಡು ಕರ್ನಾಟಕ 

ಹಾಲ ಸವಿ ಜೇನ ಸಿಹಿ 

ನನ್ನ ನಾಡಿನ ನುಡಿಯು 

ಮೃದು ಮಧುರ ಕವಿವಾಣಿ ಕರ್ನಾಟಕ

ನವರಸಾಲಂಕಾರಗಳು 

ನಿನ್ನ ನುಡಿ ಮುತ್ತುಗಳು 

ಷಟ್ಪದಿ ವಿಭೂಷಿತ ಖ್ಯಾತ ಕರ್ನಾಟಕ

ಕೃಷ್ಣ ಶರಾವತಿ ತುಂಗೆ 

ಕಾವೇರಿ ಕಪಿಲಾ ಭದ್ರೆ 

ಜೀವನದಿಗಳಾ ನಾಡು ಕರ್ನಾಟಕ 

ಹಳದಿ ಕೆಂಪಿನ ಧ್ವಜವು 

ನಿನ್ನ ಮುಡಿಗಲಂಕೃತವು 

ಶಾಂತ ಸೌಹಾರ್ದಗಳ ನಾಡು ಕರ್ನಾಟಕ

 ಜಯತು ಕನ್ನಡ ದೇವಿ 

ಜಯತು ಮಂಗಳ ಮಾತೆ 

ಜಯತು ಜಯ ಜಯ ನಿನಗೆ ಕರ್ನಾಟಕ


Rate this content
Log in

Similar kannada poem from Abstract