ಕನಸು
ಕನಸು
ವಾಸ್ತವದಲಿ ತೀರದ
ಆಸೆ ಬಯಕೆಗಳು
ಸುಪ್ತ ಮನಸ್ಸಿನ
ಆಳದಲ್ಲಿ ಹುದುಗಿ
ನಿದ್ರಾ ಲೋಕದಲ್ಲಿ
ಸಪ್ತ ವರ್ಣಗಳಾ
ಕಾಮನಬಿಲ್ಲಿನ
ಚಿತ್ತಾರಗಳು ಮೂಡಿ
ನೂರಾಸೆಗಳು
ಗರಿಗೆದರಿ ನರ್ತಿಸಿ
ಕೈ ಬೀಸಿ ಕರೆಯುವುದು
ಕನಸಿನಲಿ ಕಂಡ
ಹಸಿರು ಗಿಡ ಮರಗಳು
ತೀರದ ಆಸೆಗಳನು
ನನಸಾಗಿಸುವವು
ಆಗೊಮ್ಮೆ ಈಗೊಮ್ಮೆ
ಒಂದೊಂದು ಕನಸಿಗೆ
ಒಂದೊಂದು ಅರ್ಥಗಳು
ನವಿಲು ಗರಿ ಬಿಚ್ಚಿದರೆ
ಶುಭ ಸೂಚಕ ಸ್ವಪ್ನ
ಹಸಿರೆಂದರೆ ಶುಭಕರ
ಹಸಿರೆಂದರೆ ಉಸಿರು
