STORYMIRROR

JAISHREE HALLUR

Romance Classics Others

4  

JAISHREE HALLUR

Romance Classics Others

ಕನಸಲ್ಲಿ ಜಾರಿ ಹೋದೆ!!

ಕನಸಲ್ಲಿ ಜಾರಿ ಹೋದೆ!!

1 min
345


ಅವಸರದಲ್ಲಿ... 

ಹೊರಟಿತ್ತೊಂದಿರುವೆ

ನನ್ನ ಮಧ್ಯಾನದ ಕನಸಲ್ಲೇ


ಎಲ್ಲಿಗೆಂದರಿಯದೆ 

ಹಿಂಬಾಲಿಸಿದ್ದೆ ಕೌತುಕದಲ್ಲೆ


ಬಾಯಿ ಚಪ್ಪರಿಸುತಿತ್ತು 

ಅದು ನಿಂತ ನಿಂತಲ್ಲೇ


ಎಲ್ಲಿರುವೆ ನಾ ಎಂದೊಮ್ಮೆ 

ನೋಡಿಕೊಂಡೆನಲ್ಲೆ


ನಿನ್ನ ತುಟಿಜೇನ 

ಹನಿಯಲ್ಲಿ ತೇಲಿದ್ದೆನಲ್ಲೆ


ಸಿಹಿಯಲ್ಲಿ ಮಿಂದು

ಮತ್ತಿನಲಿ ಜಾರುತಿಹೆನಲ್ಲೇ


ಒಮ್ಮೆ ಎಳೆದುಕೋ ಒಳಗೆ

ಜೇನರಸದುಸಿರ ನಲ್ಲೇ.....


ಇಲ್ಲವಾದರೆ ನಾ ಇನ್ನೆಲ್ಲೋ

ಜಾರಿ ಹೋಗುವೆನಲ್ಲೆ...



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance