ಕನ್ನಡಿ
ಕನ್ನಡಿ


ನಾಳೆಗಾಗಿ ನಾವು ಬದುಕಲು
ಆಸೆ ಇರಬೇಕಾದ್ದು ಸಹಜ
ಮಿತಿಯಲ್ಲಿ ಇದ್ದಾಗ ಮಾತ್ರ
ಸಂತೋಷ ಎನ್ನುವುದು ನಿಜ
ಎಲ್ಲರ ಜೀವನವೂ ವಿಶಿಷ್ಟ
ಅನುಕರಣೆ ತೃಪ್ತಿ ತರದು
ನಮಗೊಂದು ಗುರಿ ಇರಲಿ
ಯಾವಾಗಲೂ ಸುಖವೇ ಇರದು
ಜಡ ವಸ್ತುವಿರಲಿ ಆತ್ಮೀಯರಿರಲಿ
ನನ್ನದೆನ್ನುವ ಅತಿಯಾದ ಹುಚ್ಚು
ಕಳೆದುಕೊಂಡಾಗ ಅದರಿಂದ
ಭರಿಸಲಾಗದ ನೋವೇ ಹೆಚ್ಚು
ಗುರುಗಳ ಮಾರ್ಗದರ್ಶನ
ಸುಗಮ ಜೀವನಕ್ಕೆ ದಾರಿ
ಹಿರಿಯರ ಅನುಭವ ನುಡಿ
ಸುಖಜೀವನದ ರಹದಾರಿ