ಕನ್ನಡ ನುಡಿ
ಕನ್ನಡ ನುಡಿ
ಕನ್ನಡ ಬರಿ ನುಡಿಯಲ್ಲ
ನಮ್ಮೆಲ್ಲರ ಉಸಿರು
ಕನ್ನಡ ಕೇವಲ ಭಾಷಿಕವಲ್ಲ
ಸಾಂಸ್ಕೃತಿಕ ಬೇರು
ಕನ್ನಡ ಕೇವಲ ಲಿಪಿಯಲ್ಲ
ಸಾಹಿತ್ಯದ ತೇರು
ಕನ್ನಡ ಬರಿ ಧ್ವನಿಯಲ್ಲ
ನಮ್ಮೆಲ್ಲರ ನಾಡಿ ಮಿಡಿತ
ಕನ್ನಡ ಕೇವಲ ನುಡಿಯಲ್ಲ
ನಮ್ಮೆಲ್ಲರ ತಾಯಿ ನುಡಿ
ಕನ್ನಡ ಬರಿ ಬರಡಲ್ಲ
ತಾಯ ಹಾಲ ಸವಿ
ಕನ್ನಡ ಕೇವಲ ನುಡಿಯಲ್ಲ
ಕೋಟಿ ಕೋಟಿ
ಕನ್ನಡಿಗರ ಜೀವಸೆಲೆ
ಕನ್ನಡವೇ ನಮ್ಮಮ್ಮ
ಅವಳ ಉಳಿಸೋಣ
ಅವಳ ಮೆರಸೋಣ
