STORYMIRROR

Sugamma Patil

Classics Inspirational Children

4  

Sugamma Patil

Classics Inspirational Children

ಖಾಲಿ ಮನಿ

ಖಾಲಿ ಮನಿ

1 min
336

      


ಪುಣ್ಯವಂತರ ಹೊಟ್ಟಿಯಾಗ ಹೆಣ್ಣು ಕೂಸು

ಹುಟ್ಟುತಾದ ತಂದಿಯ ಕಷ್ಟ ಕಳಿತಾದ ಮಗಳಾ 

ಪುಣ್ಯವಂತಿ ನೀ ಹುಟ್ಟಿ ಅರಮನಿಯನೆ ನನಗ

ಕಟ್ಟಿ ಕೊಟ್ಟು ಹೋಗಿದಿ ನೀ ಬಿಟ್ಟು ದೂರ ಮಗಳಾ


ನನ್ನ ಕೂಸು ಗಂಡನ ಮನಿಗಿ ಹೋದ ಮ್ಯಾಗ

ಮಾಸಿ ಹೋಗ್ಯಾದ ಅರಮನಿಯ ಅಂದ

ಒಳ ಹೊರಗ ನಡಿವಾಗ ಅವಳ ಹೆಜ್ಜಿ ಗುರುತು

ನೆನಪಾಗುತಾವ ನಂಗ ಭಾಳ ಕಾಡುತಾವ


ಸೀಮೆಯ ದಾಟ್ಯಾಳ ವರುಷವೆ ಕಳೆದಾಳ

ಬಡವನ ಗುಡಿಸಲಲಿ ರಾಣಿಯಂಗ ಬಾಳತಾಳ

ಹಡೆದಪ್ಪನನ್ನೇ ಯಾಕೋ ಅಕಿ ಮರೆತಾಳ

ಬಂದು ಕರೆದರೆ ತವರಿಗೆ ನಾವಲ್ಲೇ ಎನುತಾಳ


ಮನಿಯಾಗ ನೂರು ಮಕ್ಕಳು ಕೂಡಿ ಆಡಿದರೇನಾ 

ನನ್ನ ಮಗಳಂಗ ಅವರಾಗುತಾರೇನಾ ಮಗಳಾ

ನೋವನ್ನು ನುಂಗಿದಿ ಖುಷಿಯನ್ನು ಹಂಚಿದೆ

ತವರ ಮನಿಗಿ ಕೀರ್ತಿ ತಂದಿರುವೆ ನನ್ನ ಮಗಳಾ


ಮಗಳಿಲ್ಲದ ಮನಿಯಾಗ ನಾ ದಿನ ಹೆಂಗ ಕಳೆಯಲಿ ಖಾಲಿ ಗೂಡಾಗ್ಯಾದ ನಿನ್ನ ತವರ ಓ ಮಗಳಾ

ನೀ ಬಂದೊಮ್ಮೆ ಸಂತೈಸು ಈ ಹಿರಿ ಜೀವವನ್ನ

ಮರಿಬ್ಯಾಡ ಕೂಸಾ ಜೀವ ಇಟ್ಟಾದ ನಿನಮ್ಯಾಗ


Rate this content
Log in

Similar kannada poem from Classics