ಜಯಭಾರತೀ
ಜಯಭಾರತೀ
ಜಯಭಾರತೀ ಜಯಭಾರತೀ
ನಿನ್ನ ಚರಣಗಳಿಗೆ ಆರತೀ
ಶಕ್ತಿ ನೀಡು ಯುಕ್ತಿ ನೀಡು
ನಿನ್ನ ಸೇವೆಯ ಮಾಡಲು
ನಿನ್ನ ನೋವೇ ನನ್ನ ನೋವು
ನಿನ್ನ ಗೆಲುವೆ ನನ್ನದು
ನಿನ್ನ ಸೇವೆಯ ನೀಡಿ ನಮಗೆ
ಧನ್ಯರಾಗಿಸು ನಮ್ಮನು
ದೇಶ ಭಕುತಿಯ ನೀಡು ನಮಗೆ
ಓ ಸನಾತನ ಭಾರತೀ
ಜ್ಞಾನಧಾತೆ ಧ್ಯಾನದಾತೆ
ಸರ್ವಸಿದ್ಧಿ ಪ್ರದಾಯಿನಿ
ವೇದಮಾತೆ ವಿಶ್ವಖ್ಯಾತೆ
ಸರ್ವ ವಂದ್ಯೆ ಸುಪೂಜಿತೆ
ತಮವ ಕಳೆಸಿ ಬೆಳಕ ಹರಿಸಿ
ದಿವ್ಯ ಶಕ್ತಿಯ ನೀಡು ನೀ
ಭಕ್ತಿ ನೀಡು ಶಾಂತಿ ನೀಡು
ಓ ಸನಾತನ ಭಾರತೀ
