ಜನಕ ನಾ ನಿನ್ನ ಸೇವಕ
ಜನಕ ನಾ ನಿನ್ನ ಸೇವಕ
ಜನಕ ನಾ ನಿನ್ನ ಸೇವಕ
ನಾ ಕಂಡ ಮೊದಲ ನಾಯಕ
ಜನಕ ಹೊಳೆವ ಕನಕ
ಬಾದಕ ಬಯಸದ ನನ್ನ ಸಾಧಕ
ಅಮ್ಮನಿಗಿಂತ ತುಸು ಸಿಟ್ಟು ಜಾಸ್ತಿ
ಆದರೂ ನಿನಗೆ ನಾವೇ ಆಸ್ತಿ
ದೂರ ನಿನಗೆ ಮೋಜು-ಮಸ್ತಿ
ಆದರೂ ದಿನಾಲು ಪ್ರೀತಿಯಿಂದ ನಗಿಸ್ತಿ
ಮರೆಯೆನು ನೀ ಕೊಟ್ಟ ಕೈ ಹೊಡೆತ
ಅದು ಇಂದು ಹೆಚ್ಚಿಸುತ್ತದೆ ಹೃದಯಬಡಿತ
ನೀನೇ ನನಗೆ ನಾಡಿಮಿಡಿತ
ಎಂದು ಇರು ನಿ ನಗುತಾ ನಗುತಾ
ಪ್ರತಿದಿನವೂ ಮುರಿಯುವೆ ರಟ್ಟೆ
ಅದರಿಂದಲೇ ತುಂಬುವುದು ನನ್ನ ಹೊಟ್ಟೆ
ಅಪ್ಪ ನೀ ಎಂಬ ಸುಂದರ ಗಿಡ ಮನದಲ್ಲಿ ನೆಟ್ಟೆ
ಅದಕ್ಕೆ ಸುತ್ತಲೂ ಕಟ್ಟಿದೆ ಪ್ರೀತಿಯೆಂಬ ಕಟ್ಟೆ
ಕಷ್ಟ ಎಂದು ಬಂದವರ ದೂರಮಾಡುವೆ ಸಂಕಷ್ಟ
ಆ ಒಳ್ಳೆ ಗುಣ ನನಗೆ ಬಲು ಇಷ್ಟ
ನಿನಗಾಗಿ ಮಾಡಿಲ್ಲ ನೀ ಸಂಪತ್ತು
ಮಕ್ಕಳೇ ನಿನಗೆ ಸಂಪತ್ತು ಯಾವತ್ತು
