STORYMIRROR

Gireesh pm Giree

Inspirational

2  

Gireesh pm Giree

Inspirational

ಜಲ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ

ಜಲ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ

1 min
98

ಜಲ ಸಂರಕ್ಷಣೆ ನಮ್ಮೆಲ್ಲರ ಮೂಲ ಕರ್ತವ್ಯ

ನೀರಿದ್ದರೆ ತಾನೇ ಜೀವಜಲ ಸಕಲ ಚರಾಚರ

ಅಳಿವಿನಂಚಿನಲ್ಲಿದೆ ಜಲಮೂಲಗಳ ಒಡಲು

ಬರಿದಾಗಿದೆ ಬರೆದಾಗಿದೆ ಮಾನವ ಹಸ್ತಕ್ಷೇಪದಿಂದ ಅಂತರ್ಜಲದ ಮಡಿಲು


ಮರ ಕಡಿದು ನಗರವ ಮಾಡಿದರು ಆ ಸ್ಥಳದಲ್ಲಿ

ಭೂಮಿಯ ಅಂತರಾಳವ ಉಸಿರುಗಟ್ಟಿಸುವ ಕೊಳವೆಬಾವಿಯನ್ನು ತೋಡಿ

ಅಭಿವೃದ್ಧಿ ಹೆಸರಲ್ಲಿ ಕಡಿದರು ನೂರಾರು ಮರವ ಗುಡ್ಡವ

ಎಸೆದರು ನದಿಗೆ ಪ್ಲಾಸ್ಟಿಕ್ ಚೀಲವ ಈ ಮಾನವ


ನಮ್ಮ ರಕ್ಷಿಸುವ ರಕ್ಷಣಾಧಾತೇ ಪ್ರಕೃತಿಮಾತೆ

ಅವಳ ಉಳಿವೆ ನಮ್ಮೆಲ್ಲರ ಹೊಣೆಗಾರಿಕೆ

ನೆಡೋಣ ಗಿಡವ ಉಳಿಸೋಣ ಹಸಿರ ಧರೆಯ

ನಮ್ಮ ಉಳಿವಿಗೆ ಅವುಗಳ ಜೀವಂತ ಮುಖ್ಯ


ತಿಳಿಯಿರಿ ಗೆಳೆಯರೇ ತಿಳಿಯಿರಿ ಪ್ರಕೃತಿಮಾತೆಯ ಉಡುಗೊರೆಯ

ಪುನಹ ಮರೆಯಬೇಡಿ ಹಳೆಯ ತಪ್ಪ ಮರೆಯಬೇಡಿ ಅವಳಿಗೆ ಕೊಡಬೇಕಾದ ಕಪ್ಪ

ಒಂದು ಮರ ಕಡಿದರೆ ಹತ್ತು ಮರ ನೆಡು ಗೆಳೆಯ

ಫೋಲು ಮಾಡಬೇಡ ಒಂದು ಹನಿ ಜಲವ ಬನ್ನಿ ಜಲಮೂಲವ ಸಂರಕ್ಷಿಸೋಣ


Rate this content
Log in

Similar kannada poem from Inspirational