ಜೀವ
ಜೀವ
ಬಾಳಿಗೆ ಹಸಿರಕಳೆಯು ನಿನ್ನಿಂದ ಅನುದಿನವು
ಏಳಿಗೆ ಪ್ರತಿಕ್ಷಣವು ನಿನ್ನಿಂದ ಅನುದಿನವು
ನಿನ್ನ ಪಡೆದ ಈ ಜನುಮ ಸಾರ್ಥಕ ಗೆಳೆಯ
ಹರಿಸುವೆ ನೀ ನಗುವಿನ ಮಳೆಯ
ಹರಿಸುವೆ ನೀ ಪ್ರೀತಿಯ ಹೊಳೆಯ
ಮನದೊಳಗೆ ಅದು ನನ್ನ ಹೃದಯದೊಳಗೆ
ನೀ ಸಿಕ್ಕಿದ ಬಳಿಗೆ ಅದ್ಭುತಗಳಿಗೆ
ದುಃಖದಲ್ಲಿರುವಾಗ ಬಂದೆ ನೀ ನನ್ನ ಬಳಿಗೆ
ಕಷ್ಟಕ್ಕೆ ಹೇಳಲಾಗುವೆ ಉಸಿರಿಗೆ ಉಸಿರಾಗುವೆ
ನೋವಲ್ಲೂ ನಲಿವಲ್ಲು ಸದಾ ಜೊತೆಯಾಗಿರುವೆ
ನಾ ಕಂಡ ಅಪರೂಪದ ಬಂಗಾರ
ಹುಡುಕಿದರು ಒಂದಿಷ್ಟು ಸಿಗದು ನಿನ್ನಲ್ಲಿ ಅಹಂಕಾರ
ಜೀವನವೆಂಬ ಪಯಣದಲ್ಲಿ ನನಗಾದೆ ನಿ ಟಿಕೆಟ್
ನಿನ್ನ ಮಾತಿನ ಚಕಮಕಿ ಅಬ್ಬಾ ರಾಕೆಟ್
ನೀನೆ ನನ್ನ ಜೀವ ನೀನೆ ನನ್ನ ದೇವ
ಒರಿಸಿದೆ ಕಣ್ಣೀರ ನೋವ ತಂದೆ ಸಂತಸದ ನಲಿವ
ಸುಂದರ ಜಾವಾ ಹಳ್ಳಿಯಲ್ಲಿದ್ದರೆ ಜೀವ
