ಹೂವು ಮುಳ್ಳು
ಹೂವು ಮುಳ್ಳು
ಮುಳ್ಳಿನ ನಡುವೆ
ಅರಳುವ ಮುದ್ದಿನ
ಚೆಂಗುಲಾಬಿ ಹೂವೇ
ಮುಳ್ಳಿನ ನಡುವೆಯೂ
ಮೂಡುವ ಸುಮನಸ
ಪ್ರೇಮಿಗಳ ಪ್ರೀತಿಯ
ಪ್ರೇಮದ ಪುಷ್ಪವೇ
ನೀ ಪ್ರೇಮಿಗಳ ಸೇತುವೆ
ಸುಂದರ ಹೃದಯದ
ಪ್ರೇಮಿಗಳಿಗೆ ನೀನೆಂದರೆ
ಎಲ್ಲಿಲ್ಲದ ಪ್ರೀತಿ ನಂಬಿಕೆ
ಬದುಕಿನ ಸುಖ ಸಂತೋಷಕೆ
ನೀ ಸಂಕೇತ ಚೆಂಗುಲಾಬಿ
