STORYMIRROR

Vijaya Bharathi

Abstract Others Children

2  

Vijaya Bharathi

Abstract Others Children

ಹುಣ್ಣಿಮೆ ಚಂದಿರ

ಹುಣ್ಣಿಮೆ ಚಂದಿರ

1 min
102

ನೋಡು ನೋಡು 

ಬೇಗ ನೋಡು 

ಓಡುತಿಹನು ಚಂದಿರ


ದುಂಡು ದುಂಡು 

ತಂಪು ತಂಪು 

ನೋಡಲೆಷ್ಟು ಸುಂದರ


ನೀಲಿಬಾನು

ಬಿಳಿಯ ಮೋಡ

ಚುಕ್ಕಿ ನಡುವೆ ಚಂದಿರ


ತೇಲಿ ತೇಲಿ

ಸಾಗಿ ಸಾಗಿ 

ಈಜುತಿಹನು ಸುಂದರ


ಹಾಲು ಬೆಳಕು

ಸುತ್ತ ಹರಡಿ

ನಗುತಲಿಹನು ಚಂದಿರ


ನೋವ ಮರೆಸಿ 

ನಗುವ ತರಿಸಿ

ಮುದವನೀವ ಸುಂದರ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract