ಹಸಿವು
ಹಸಿವು


ಮನುಜನ ಏಳುಬೀಳುಗಳಿಗೆ ಈ ಹಸಿವೆಯೇ ಮೂಲ ಕಾರಣ
ಹಸಿವಿನಲ್ಲೂ ಹಲವಾರು ವಿಧಗಳಿವೆ ನೀನರಿಯಣ್ಣ
ಹೊಟ್ಟೆಯ ಹಸಿವು ಇದು ಪ್ರಕೃತಿಯ ನಿಯಮವಣ್ಣ
ಹೊಟ್ಟೆಯು ಹಸಿದಾಗ ಕೋಪ, ರೋಷದಲ್ಲಿ ಕೂಗಾಡುವರು.
ಅಧಿಕಾರದ ಹಸಿವಿಗೆ ಕೊಲೆ,ಸುಲಿಗೆಯ ಮಾಡಿಸುವರು.
ಹಣದ ಹಸಿವಿಗೆ ನ್ಯಾಯ, ನೀತಿ, ಮಾತು ತಪ್ಪಿ ನಡೆಯುವರು.
ಭಿಕ್ಷುಕನ ಹಸಿವು ತುತ್ತು ಅನ್ನಕ್ಕಾಗಿ
ಸಿರಿವಂತನ ಹಸಿವು ಅಧಿಕಾರದ ದಾಹಕ್ಕಾಗಿ
ಸಜ್ಜನರ ಹಸಿವು ನ್ಯಾಯಯುತ ಜೀವನಕ್ಕಾಗಿ
ಯಾರ ಹಸಿವು ಹೇಗೆ ಇರಲಿ, ಸಂಸ್ಕಾರಯುತ ಜೀವನ ನಡೆಸಲು ಪ್ರಯತ್ನಿಸೋಣ.
ಅನ್ನವ ಚೆಲ್ಲುವುದು ನಿಲ್ಲಿಸೋಣ, ಹಸಿದಿದ್ದ ಹೊಟ್ಟೆಯ ತಣಿಸೋಣ.
ತಾನು ಹಸಿದಿದ್ದರೂ ಜಗದ ಹಸಿವು ತಣಿಸವವನು ರೈತನೆಂಬುದು ತಿಳಿಯೋಣ.