ಹಸಿವು
ಹಸಿವು
ಹೊಟ್ಟೆಗೆ ಸಾಲುವಷ್ಟು ಆಹಾರವ ತಟ್ಟೆಗೆ ಹಾಕು
ಮಿಕ್ಕ ಆಹಾರವ ಹಸಿದವನಿಗೆ ನೀಡಬೇಕು
ಆಹಾರ ಪೋಲು ಮಾಡಿ ಫಲವಿಲ್ಲ ನಿನಗೆ
ಆಹಾರ ದಾನ ಮಾಡಿದರೆ ಒಳಿತು ನಿನ್ನ ಬಾಳಿಗೆ
ಹಗಲು-ಇರುಳು ಹಸಿವಿನಿಂದ ಕಳೆಯುವವರೇ ಜಾಸ್ತಿ
ಆದರೆ ಅರ್ಧ ತಿಂದು ಬಿಸಾಡುವುದು ನಮ್ಮಂತವರಿಗೆ ಮಸ್ತಿ
ಕೈಲಾದ ದಾನ ಕೊಡು ಓ ಪ್ರಿಯ ಮಾನವ
ಅವರ ಕೈಯಿಂದ ಕಿತ್ತು ಆಗಬೇಡ ನಿ ಧಾನವ
ಹಸಿವೇ ಕಲಿಸುತ್ತದೆ ಆಹಾರದ ಬೆಲೆಯ
ಆಹಾರವೇ ಕಲ್ಪಿಸುವುದು ನಮಗೆ ನೆಲೆಯ
ಅರೆ ಬರೆ ಆಹಾರ ತಿಂದರೆ ರೋಗ
ಬರುವುದು ಕಂಡಿತ ನಿನಗೀಗ
