ಹರೆಯದ ಪ್ರೀತಿ
ಹರೆಯದ ಪ್ರೀತಿ
ಬದುಕಿನ ಇಳಿಸಂಜೆಯಲಿ
ಒಮ್ಮೆಯಾದರು ಸಿಗೋಣ
ಹದಿ ಹರೆಯದ ನೆನಪುಗಳ
ಮೆಲುಕಿಸುವ ಜೊತೆಗೂಡಿ!!
ಹಸುರಾದ ಪ್ರೀತಿಯಲಿ
ಕನವರಿಕೆಯ ಕನಸುಗಳು
ಒಲವಿನ ಜೊತೆ ಜೊತೆಯಲಿ
ಹುಸಿ ಮುನಿಸು ಬೆರೆತು!!
ಜೀವನದ ಪಯಣದಲಿ
ಕವಲೊಡೆದವು ಹಾದಿಗಳು
ಗುರಿ ಮುಟ್ಟಿವೆ ಮನಸುಗಳು
ಅದ್ಯಾವುದೋ ರೀತಿಯಲಿ!!
ಕಾಲಚಕ್ರವು ತಿರುಗಿ ತಿರುಗಿ
ಸಂಧಿಸಿದರೆ ಎಂದಾದರೊಮ್ಮೆ
ನಮ್ಮ ಹರೆಯದ ತಪ್ಪುಗಳ
ಮನ್ನಿಸಿ ಮುನ್ನಡೆಯೋಣ!!
ಮತ್ತದೇ ಕವಲುದಾರಿಯ ನೋಟ
ಏಕಾಂತದ ಕಡೆಗೆ ಹೊರಟಿದೆ ಪಯಣ
ಮರೆತು ಹೋದ ಮನಸಿನಲಿಂದು
ಮರೆಯದ ಹೊತ್ತು ಸಂಗಾತಿಯ ನೆನಪು!!

