ಹೊಂದಾಣಿಕೆ
ಹೊಂದಾಣಿಕೆ
ಬುದ್ಧಿ ಬಯಸುತ್ತಿದೆ ನಿನ್ನೊಂದಿಗೆ
ಹೊಂದಾಣಿಕೆ ಆಗಬೇಕೆಂದು...
ಆದರೆ ಮನಸ್ಸೇಕೋ ಒಪ್ಪುತ್ತಿಲ್ಲ
ಕಾರಣವು ನೂರೊಂದು..!!
ನೀ ಎಸಗಿದ ಹಳೆಯ ತಪ್ಪುಗಳನ್ನೇ ನೆನೆನೆನೆದು,
ಒಪ್ಪುತ್ತಿಲ್ಲವೇಕೋ ಗೆಳೆತನ ಮಾಡಲು
ಈ ನನ್ನ ಹೃದಯವು..!!
ಮತ್ತೊಮ್ಮೆ ಮಗದೊಮ್ಮೆ ಎಲ್ಲವನ್ನೂ
ಮರೆತು ಮುಂದುವರೆಯಲು
ನಿನಗೆ ಗೊತ್ತಲ್ಲವೇ ನಾ ದೇವನಲ್ಲವೆಂದು...!!
