ಹಣ
ಹಣ
ಹಣ ನೋಡದ ಕಣ್ಣುಗಳಿಲ್ಲ
ಅದು ಮೋಡಿ ಮಾಡದ ಜನಗಳಿಲ್ಲ
ಇದು ಮುಟ್ಟದ ಜಾಗವಿಲ್ಲ
ಇದು ಇರದ ಮನೆಯ ನಾನೆಂದೂ ಕಂಡಿಲ್ಲ
ಮಾಯೆಯ ಮಾಡಿದೆ ಎಲ್ಲರ
ಇದರಿಂದಾಗಿ ವಿಶ್ವದ ಸಕಲ ಚರಾಚರ
ಗುಣಕ್ಕೆ ಬೆಲೆ ಇಲ್ಲದ ಈ ಕಾಲ
ಹಣ ಇದ್ದರೆ ಮಾತ್ರ ಇಲ್ಲಿ ಉಳಿಗಾಲ
ಕಾಗದ ನೋಟು ಮಾಡಿದ ಮೋಡಿ
ಎಲ್ಲರ ನೆಚ್ಚಿನ ಮಿತ್ರ ಇವನೇ ನೋಡಿ
ಎಲ್ಲದಕ್ಕೂ ಬೇಕು ಇವನ ಮಧ್ಯಸ್ಥಿಕೆ
ತೀರಿಸುವ ತೀರದವರ ಬಯಕೆ.
