STORYMIRROR

Meenakshi "meeನ"

Fantasy

2  

Meenakshi "meeನ"

Fantasy

ಹಕ್ಕಿಯ ಲೋಕ..

ಹಕ್ಕಿಯ ಲೋಕ..

1 min
137

ಬೆಳದಿಂಗಳ ರಾತ್ರಿಯಲಿ ,

ಮೈ ಕೊರೆವ ಚಳಿಯಲಿ

ನಿನ್ನ ಅಪ್ಪಿ ಲೋಕವ 

ಮರೆಯಬೇಕು


ನಿನ್ನ ಬೆಚ್ಚಗಿನ ತೋಳಿನಲಿ 

ಕಟ್ಟಿ ಬಿಡು ಎನ್ನ

ನಿನ್ನೆದೆಯ ಗೂಡಲ್ಲಿ 

ಆಗುವೆ ನಾನೊಂದು ಮರಿ ಹಕ್ಕಿ


ನಿನ್ನ ಕಣ್ಣ ಸಾಗರದಲಿ 

ಮುಳುಗಬೇಕೆಂಬ ಆಸೆ.

ನೀ ಎನ್ನ ಹಣೆಗೆ ಚುಂಬಿಸುವ ಪರಿ

ನಾ ಎಂತು ಬಣ್ಣಿಸಲಿ

ಅನಿಸುತಿದೆ ಕಾಲವೇಕೋ;

ನಿಂತು ಬಿಡಲಿ ಇಲ್ಲೆ ಎಂದು


ಮರಳಿ ಈ ಲೋಕಕೆ 

ಬರುವ ಬಯಕೆ ಇಲ್ಲ

ಜೀವನ ಸವೆದು ಬಿಡುವೆ 

ನಿನ್ನ ತೋಳ ಸೆರೆಯಲಿ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Fantasy