ನಿನ್ನ ನೆನಪೊಳು..!
ನಿನ್ನ ನೆನಪೊಳು..!
1 min
235
ನಿನ್ನ ನೆನಪೊಳು ನನ್ನ ಮನ ಕಾಯುತಲಿದೆ ಗೆಳೆಯ..
ಮಳೆಗೆ ಕಾದ ಹಾಗೆ ಇಳೆ
ನಿನ್ನ ನೆನಪೊಳು ಮನ ಕುಣಿಯೂತಲಿದೆ ಗೆಳೆಯ
ಮೋಡವ ನೋಡಿ ನವಿಲು ನರ್ತಿಸಿದ ಹಾಗೆ
ನಿನ್ನ ನೆನಪೂಳು ಮನ ನಗುತಲಿದೆ ಗೆಳೆಯ
ಮುಗ್ಧ ಕಂದನ ನಗುವಿನ ಹಾಗೆ
ನಿನ್ನ ನೆನಪೂಳು ಮನ ಹಾರುತಲಿದೆ ಗೆಳೆಯ
ಬಣ್ಣದ ಚಿಟ್ಟೆ ಹಾರಿದ ಹಾಗೆ
ನಿನ್ನ ನೆನಪೂಳು ಮನ ಓಡುತಲಿದೆ ಗೆಳೆಯ
ಕಡಲು ದಡವ ಮುಟ್ಟುವ ಹಾಗೆ
ನಿನ್ನ ನೆನಪೂಳು ಮನ ಕುಗೂತಲಿದೆ ಗೆಳೆಯ
ಹಸುವಿಗೆ ಕರು ಕರೆದ ಹಾಗೆ
ನಿನ್ನ ನೆನಪೂಳು ಮನ ಅರಳುತಲಿದೆ ಗೆಳೆಯ
ಹೂ ಅರಳಿದ ಹಾಗೆ
ನಿನ್ನ ನೆನಪೂಳು ನನ್ನ ಮನ ನಾಚುತಲಿದೆ ಗೆಳೆಯ.
ಜೇನು ಹೀರಿದ ಮಕರಂದದ ಹಾಗೆ