STORYMIRROR

Meenakshi "meeನ"

Others

2  

Meenakshi "meeನ"

Others

ಮೌನಿ ಅವನು ...!

ಮೌನಿ ಅವನು ...!

1 min
114

ಪ್ರೀತಿ ಎಂದರೇನು ಗೆಳೆಯ..

ನಿನ್ನ ಒಂದು ಮಾತಿಗೋಸ್ಕರ

ಕಾಯುವದಾ?...

ನಿನ್ನ ಒಂದು ನೋಟಕೆ

ಪರಿತಪಿಸುವದಾ?


ನಿನಗಾಗಿ ನೀ ಬರುವ ದಾರಿ ಕಾಯುವದಾ?....

ನಿನ್ನ ಕಾಳಜಿಗಾಗಿ ಹಂಬಲಿಸುವದಾ?...

ಕಾದ ನನ್ನ ಮನಕೆ ನಿನ್ನ ಮೌನ ಕೊಲ್ಲುತ್ತಿದೆ ಗೆಳೆಯ


ಮುಳುಗಬೇಕೆಂಬ ಬಯಕೆ

ನಿನ್ನ ಕಣ್ಣಲಿ ಆದರೆ ,

ಕಣ್ಣಮುಚ್ಚಿ ಕುಳಿತೆಕೆ?

ನೀನು ಕಣ್ಣತೆರೆದು ಅರಿ ಒಮ್ಮೆ ಈ ಪ್ರೀತಿಯ ಸಾಗರ


ನೀ ಬಿಟ್ಟೋಗುವೇನೆಂದರು

ಸಾಗರದ ಅಲೆ ಬಂದು ಅಪ್ಪುವದು....

ಕಾಯಿಸದಿರು ಗೆಳೆಯ ಈ ಪ್ರೀತಿಗೆ ....

ನಿನಗಾಗಿ ಕಾದ ನನ್ನ ಹೃದಯ ಒಡೆದು,

ನೀ ಬರುವ ದಾರಿಗೆ ಕಲ್ಲಾದರೆ.......?


ನಿನ್ನ ಪ್ರೀತಿ ಬೇಕೆಂದು ರಚ್ಚೆ ಹಿಡಿದು

ಕುಳಿತ ನನ್ನಿ ಹೃದಯ ಇಲ್ಲವಾದರೆ...?

ಸಾವಿಗೂ ಮುನ್ನ ಬಂದು ತಿಳಿಸಿಬಿಡು

ಗೆಳೆಯ ಪ್ರೀತಿ ಎಂದರೆನೆಂದು......?   


Rate this content
Log in