ಕಲ್ಕಿ
ಕಲ್ಕಿ
1 min
230
ಅಲೆದಾಟದ ಅಲೆಗಾರನಿಗೆ
ಇರುವುದೊಂದು ನೆಲೆ..
ಅಲೆ ಅಲೆಯಂತೆ ತಿರುಗುವ
ಕಲೆಗಾರ.
ಭಾವನೆಗಳ ತೋರುಗೊಡದ
ಕಡು ಗಪ್ಪಿನ ಕಣ್ಣು .
ಮುಖದ ರಾಜ ಗಂಭೀರ್ಯ ಹುದುಗಿಸಿದೆ
ಮನಸಿನ ಪೋಲಿತನ.
ಬಡವ ಬಲ್ಲಿದರಿಗಾಗಿ
ಮೀಸಲಿಟ್ಟ ಬದುಕನ್ನು ..
ಸನ್ಯಾಸಿ ಅಲ್ಲದ
ಕಡು ಕೆಂಪಿನ ಖಾವಿ ತೊಟ್ಟವ...
ತಾಯ ಕರುಳಿನ ಜೀವಿಯಂತೆ..
ತಿಳಿ ಹೇಳುವ ತಂದೆಯಂತೆ..
ತಪ್ಪಿದ್ದರೂ ಬಿಟ್ಟುಕೊಡದ ಗೆಳೆಯನಂತೆ.
ಹೇಳಿಕೊಳ್ಳದ ಕೆಲಸದ ಉದ್ಯೋಗ
ತನಗಾಗಿ ಸಮಯವಿಡದ ನಿರುದ್ಯೋಗಿ
ತನ್ನವರಿಗಾಗಿ ದುಡಿಯುವ ತ್ಯಾಗಿ...
ಉಳಿಗಾಲವಿಲ್ಲ ಅವನ ಮುಂದಿನ ಅನ್ಯಾಯಕ್ಕೆ
ಕೊನೆಗಾಣಿಸಿ ಬಿಡುವ ಕಾಡುಪಾಪಿಯನ್ನು.
ನಾಮಾಂಕಿತವಿಲ್ಲದ ಅನಂತ ಕಾಲದ ಕಲ್ಕಿ.
ತನ್ನ ಕೊನೆಯ ಹನಿಯ ನೆತ್ತರು ಇರುವವರೆಗೂ
ಹೋರಾಡುವ ಅಂಕಿತ.