ಹೊಸತನದ ಹರಿವು..
ಹೊಸತನದ ಹರಿವು..
1 min
92
ಸದಾ ಕಾಡುವ , ಯಾವುದೋ ಗೀಚುವ ಅಲೆ ಅಲೆಯ ನೆನಪಂತೆ
ನಿನ್ನ ಭಾವ ತರಂಗಗಳು
ನಿನ್ನನ್ನೊಮ್ಮೆ ಎರವಾಲಾಗಿ ಪಡೆಯುವ ಬಯಕೆ
ಬಂದಾದರೂ ನೋಡು ಅದೆಷ್ಟು ಹೊಸತನದ ಹರಿವಿನಂತೆ
ಬರೆದೋ ಬರೆದು ನಿನ್ನ ತುಂಬಿಸುವೆ ನನ್ನೆಲ್ಲ ಕನಸುಗಳಿಂದ
ನಾನೊಂದು ಸೊಗಸು, ನಿನ್ನ ಸನಿಹದಿಂದ
ನಾನೊಂದು ಕನಸು ನಿನ್ನ ಕನವರಿಕೆಯಿಂದ
ಮನದ ಮೂಲೆಯಲ್ಲೋ ಮರುಕಳಿಸುವ ನಿನ್ನ ಮಂದಹಾಸ
ಮತ್ತೆ ಮತ್ತೆ ಬರೆಯುವ ಉತ್ಸಾಹ ನೀಡದೆ!
ಎಲ್ಲವನ್ನೂ ಪದಗಳಲ್ಲಿ ಬಂಧಿಸಿ ಇಟ್ಟು.
ನಿನ್ನೊಂದಿಗಾಡುವ ಸಾವಿರ ಮಾತುಗಳು ,
ಹೀಗೂ.. ಹೇಳಬೇಕೆಂದನಿಸಿದಾಗ..,
ಪದಗಳೇ ದೂರ ಓಡಿದವ..!
ಬರೆವ ಕೈ ನಡುಗೀತ..! ಅಸ್ಪಷ್ಟ ಮನಸಿನ ಚಿತ್ರಣಕ್ಕೆ
ಯಾವುದೊಂದು ಗೋಚರಿಸಿದಿರಲು
ಕಣ್ಣ ಕತ್ತಲೆ ಕಟ್ಟಿ ಹಾಕಿದೆ
