STORYMIRROR

Meenakshi "meeನ"

Others

2  

Meenakshi "meeನ"

Others

ಪ್ರಕೃತಿ

ಪ್ರಕೃತಿ

1 min
157

ಹಸಿರ ಸೀರೆ ಉಟ್ಟು ನಿಂತ 

ನೀರೆಗೆ ಸಾಟಿ ಯಾರು.....

ಬಾಗಿವೆ ಮೋಡಗಳು 

ಅವಳ ಮೈಮಾಟಕೆ .....


ಅಭ್ಯಂಜನ ಮಾಡಿದಿಸಿದ ವರುಣ 

ಇವಳ ನೋಟಕೆ.....

ಬಿಗಿದಪ್ಪಿದೆ ಪ್ರೀತಿಯಿಂದ ಭೂಮಿ 

ಇವಳನು.....

ಸೇರಿದವಳಿವಳು ನಾಚಿಕೆಯಿಂದ 

ಭೂಮಿಯಒಡಲನು....


ಬೀಸುವ ಗಾಳಿಯ ಮೂಲಕ 

ಭಾವನೆಗಳನ್ನು ಹಂಚುವ 

ವೈಖರಿಗೆ ಮನಸೋತೆ ..... ... 

ಕಳೆದೊಗಬೇಕೆಂಬ ಬಯಕೆ ಈ 

ಭಾವನೆಯಲ್ಲಿ....


ಬದುಕು ಸಾಗಿಸಬೇಕೆಂಬ 

ಆಸೆ ಈ ಭರವಸೆಯಲಿ....

ಮೌನದಲೇ ಮಾತಾಡುವಾಸೆ 

ಈ ಹೃದಯದಲಿ....


ಮುದ್ದಿಸಬೇಕೆಂಬ ಹಂಬಲ 

ಈ ಕಣ್ಣಿಗೆ.....

ಜೊತೆಆಡಬೇಕೆಂಬ ಕನಸು 

ಈ ಮನಸಿಗೆ....

ಜೀವನಪೂರ್ತಿ ಜೊತೆಗಿರಬೇಕೆಂಬ ಬಯಕೆ 

ಈ ಜೀವಕೆ.... 


ಅದೆಷ್ಟು ಚೆಂದ ಈ ಪ್ರೀತಿ.....

ಹೇಳು ಹಸಿರೆ ಪ್ರೀತಿಸಿಬಿಡಲೇ 

ಒಮ್ಮೆ ನಾ ನಿನ್ನ ....

ನಿ ಹೇಳು ಗೆಳತಿ ನಾ ನಿನ್ನ ಜೊತೆಯಾಗಿ 

ಬರಲೇ ಹಸಿರ ಉಸಿರಾಗಿ


Rate this content
Log in