ಆಟ
ಆಟ
1 min
298
ಆಡೋಣ ಬನ್ನಿ ಆಟ
ಜಾನಪದ ಆಟ
ಕೈ ಕೈ ಹಿಡಿದು ಸಕ್ಕಸರಗಿ ಆಟ
ಕಾಲಲಿ ಕುಂಟಿ ಕುಂಟೆ ಬಿಲ್ಲೆ ಆಟ |
ಆಡೋಣ ಬನ್ನಿ ಆಟ
ಹುಣಸೆ ಬೀಜ ದ ಆಟ
ಹಳೆಗುಳಿಮನೆ ಆಟ
ಅದರ ಜೊತೆಗೆ ಚೌಕಾಬಾರಾ ಆಟ |
ಆಡೋಣ ಬನ್ನಿ ಆಟ
ಗೆಳತಿಯ ಜೊತೆ ಆಟ
ಲಗೋರಿ ಜೊತೆಗೆ
ಕಣ್ಣಾ ಮುಚ್ಚೆ ಆಟ |
ಆಡೋಣ ಬನ್ನಿ ಆಟ
ತಂಡದ ಜೊತೆಗೆ ಆಟ
ಕಬಡ್ಡಿ ಮತ್ತು ಖೋ ಖೋ ಜೊತೆಗೆ
ವ್ಹಾಲಿ ಬಾಲ್ ಬಾಸ್ಕೇಟ್ ಬಾಲ್ ಆಟ |
ಮಕ್ಕಳೇ ಕೇಳಿ
ಬಿಟ್ಟು ಬಿಡಿ ಮೊಬೈಲಿನಲ್ಲಿಯ ಆಟ
ಗೆಳೆಯರ ಜೊತೆ ಸೇರಿ ಆಡಿರಿ ಆಟ
ಜೊತೆಗೆ ಸ್ವಲ್ಪ ತುಂಟಾಟ....
