ಹೆಣ್ಣಾಗಿ ಹುಟ್ಟಬಾರದಾ...?
ಹೆಣ್ಣಾಗಿ ಹುಟ್ಟಬಾರದಾ...?
ಒಮ್ಮೆಮ್ಮೆ ಮನದಿ ಕಾಡುವವು
ಪ್ರಶ್ನೆಗಳು , ಒಂದೊಂದಾಗಿ
ಹೆಣ್ಣಾಗಿ ಹುಟ್ಟಿದ್ದು ತಪ್ಪಾ..??
ನಾಲ್ಕು ದಿನದ ನರಕವ ಸಹಿಸಬಹುದು
ಆದರೆ ಸಂಪ್ರದಾಯದ ಬೇಲಿಯ
ಹೆಣ್ಣಿನಿಂದ ಕಿತ್ತು ಹಾಕಲಾಗದೇ..?
ಶರತ್ತುಗಳ ಹೆಣ್ಣು ಹಾಕಿದರೆ
ಆಕೆಗೊಂದು ಪಟ್ಟ ಸಂಸ್ಕಾರವಿಲ್ಲದವಳು
ಅದೇ ಕಟ್ಟುಪಾಡುಗಳ ಗಂಡು ಹಾಕಿದರೆ..??
ತಾನಿರುವ ಮನೆಯಲ್ಲು ಪರಕೀಯಳು
ಹೋಗುವ ಮನೆಯಲ್ಲಿ ಹೆಣ್ಣು ಅಪರಿಚಿತೆ
ತಾತ್ಸಾರದ ನೋಟಗಳು ದುಡಿಯಲಾರಳೆಂದೇ..?
ಮನೆಯೊಳಗು ದುಡಿದು, ಹೊರಗು ದುಡಿದು
ದಣಿದು ಬಂದವಳೆಡೆ ನೋಡಿ ಅಹಂಕಾರವೆಂಬುವರು
ಅವಳ ಗರಿಗರಿ ನೋಟುಗಳು ಇವರಿಗೆ ಬೇಕು
ಹೆಣ್ಣಾಗಿ ಹುಟ್ಟುವುದೇ ತಪ್ಪಾ...?
ಪ್ರಶ್ನೆಗಳಿಗೆ ಉತ್ತರವಿಲ್ಲ
ಉತ್ತರವಿರದ ಪ್ರಶ್ನೆಗಳು ಇದ್ದಾವೆ.
