ಹಬ್ಬ ಹಬ್ಬವೆ
ಹಬ್ಬ ಹಬ್ಬವೆ
ಇರುವವರು ಆಚರಿಸುವರು ದೀಪಾವಳಿ
ಇರದವರು ಆಚರಿಸುವರು ದೀಪಾವಳಿ
ಇದ್ದವರದ್ದು ಆಡಂಬರ
ಇರದವರದು ಆಡಂಬರ,
ಇರುವವರದು ವಿದ್ಯುತ್ ದೀಪ, ಮೇಣದ ದೀಪ,
ಇರದವರದ್ದು ಎಣ್ಣೆ ದೀಪ,
ಇದ್ದವರದ್ದು ಮೃಷ್ಟಾನ್ನ ಭೋಜನ,
ಇರದವರದ್ದು ಇರುವುದು ಭೋಜನ,
ಇದ್ದರೇನು?
ಇರದಿದ್ದರೇನು?
ಹಬ್ಬ ಹಬ್ಬವೆ!!
ತೃಪ್ತಿಯ ಬದುಕು ಇದ್ದರೆ
ಆಚರಿಸುವರು ದಿನವೂ ಹಬ್ಬ
