Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Arjun Maurya

Drama Action Others

4.0  

Arjun Maurya

Drama Action Others

ಗಟ್ಟಿಗನಲ್ಲದಿನ್ನೇನು..?

ಗಟ್ಟಿಗನಲ್ಲದಿನ್ನೇನು..?

1 min
197


ಅಮ್ಮನ ಸೀರೆಯ

ಸೆರಗಿನಾಧಾರವಿಡಿದು

ನಡೆವಾಗ

ನನ್ನ ಪುಟ್ಟ ಕಾಲಿಗೆ

ಚುಚ್ಚಿದ್ದು ಅದೊಂದು

ಸಣ್ಣ ಮುಳ್ಳು..

ಅಷ್ಟೇ..

ಅಬ್ಬಾ..ಈಗಲೂ ನೆನಪಿದೆ

ನಾನು ಅದ

ನೆನಪಿಸಿಕೊಂಡು

ನೋವಿದೆಯಿನ್ನೂ ಎಂದುಕೊಂಡೇ

ಅತ್ತೂ ಅತ್ತೂ

ಸೊರಗಿದ್ದೂ ಇದೆ |

ಆದರೀಗ..?

ಮುಳ್ಳುಗಳೆಷ್ಟು..

ಗುರಿಯಿಟ್ಟೇ ಎಸೆಯುವ

ಈಟಿಗಳೆಷ್ಟು ||

ಆದರೂ

ನಗುತ್ತೀನಲ್ಲಾ..||

ಅದೇನು ಸಾಮಾನ್ಯ

ಮುಳ್ಳುಗಳೇ..?

ಹೃದಯದ ಇಂಚಿಂಚು

ಜಾಗವನ್ನೆಲ್ಲಾ

ಚುಚ್ಚಿಚುಚ್ಚೀ..

ಸಾಯಿಸೋ

ವಿಷದ ಬಾಣಗಳು |

ಆದರೂ ನಗುತ್ತೀನಲ್ಲ..

ಗಟ್ಟಿಗನಲ್ಲದಿನ್ನೇನು?

ಬದುಕಲೇಬೇಕಲ್ಲ

ಗಟ್ಟಿಯಾಗಲೇಬೇಕಲ್ಲ ||



Rate this content
Log in

Similar kannada poem from Drama