ಹಾಲು ಜೇನು
ಹಾಲು ಜೇನು
ನನ್ನ ಜೀವದ ಗೆಳೆಯ ನೀನು
ನಿನ್ನಿಂದ ದೊರಕಿದ ಬದುಕಿದು
ಕಾಣದ ಕನಸನ್ನು ನನಸಾಗಿಸಿದವ ನೀನು
ನಿನ್ನ ಜೊತೆಗಿರುವೆ ಎಂದೆಂದು
ಒಲವಿನ ಬಣ್ಣ ಎರಚಿದವ ನೀನು
ಆ ಬಣ್ಣದಲ್ಲಿ ಜೀವನ ಕಂಡುಕೊಂಡವಳು ನಾನು
ನಿನ್ನಿಂದಾಯಿತು ನನ್ನ ಬದುಕು ಹಾಲು ಜೇನು

