ಗೂಡು
ಗೂಡು
ಚಳಿಗಾಲದ ಆ ಚಳಿಯಲ್ಲೂ
ಬೆಚ್ಚನೆಯ ಚಳುವಳಿ
ಹೂಡುವ ಬಯಕೆ ll
ನಿದಿರೆಯ ಮುಗ್ಧ
ವದನದ ಆಕರ್ಷಕ
ಸಿಂಚನಕೆ ಮನಸೋತ
ನಾನು ಗರಿ ಬಿಚ್ಚಲು
ಕಾತರ ll
ಅವಳೋ ಬೆಚ್ಚನೆಯ
ಹೃದಯದ ಗೂಡು
ನಾನು ಗೂಡಿನೊಳಗಿನ
ಪ್ರಾಣಪಕ್ಷಿ..
ಮನಸಾಗದು
ಹಾರಲು
ಮತ್ತು
ಗೂಡು ಬಿಡಲು ll

