STORYMIRROR

Lakumikanda Mukunda

Abstract Action Inspirational

3  

Lakumikanda Mukunda

Abstract Action Inspirational

ಗಜಲ್

ಗಜಲ್

1 min
153

ಎಂದೂ ಬಾಡದ ಹೂವ ಬೆಳದವರಾರು ಸಾಕಿ..

ಬದುಕಿನುದ್ದಕ್ಕೂ ಮೆಲ್ಲನೆ ನಕ್ಕವರಾರು ಸಾಕಿ..


ಕಲ್ಲೆದೆಯ ಕಲಿಗಳೆದೆಯಲ್ಲೂ ಅಳುಕಿದೆಯಂತೆ

ಬದುಕಿನಾಳದ ತಿರುವ ಬಲ್ಲವರಾರು ಸಾಕಿ..


ವೈರಿ ಇರಿದ ವಿಷದ ಕತ್ತಿ ತೂಗುತ್ತಿದೆ ನೆತ್ತಿಗುಂಟ

ವೈರತ್ವಕ್ಕೆ ಒಲವ ಮದ್ದು ಅರಿದವರಾರು ಸಾಕಿ..


ಕೆಸರಿನಾಳಕ್ಕಿಳಿದು ತಾವರೆ ಹಿಡಿದವ ನಾನು

ಏರಿ ಬರುವಾಗ ಮತ್ತೆ ನೂಕಿದರ್ಯಾರು ಸಾಕಿ.


ಅರಿತವರೆದೆಯ ಚಿನ್ನ,ಅರಿಗಳೆದೆಗೆ ಗುನ್ನ

ಇಡುವ ಲಕುಮಿಕಂದನ ಅರಿತವರಾರು ಸಾಕಿ..


Rate this content
Log in

Similar kannada poem from Abstract