STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಗೌರೀ ಗಣೇಶ

ಗೌರೀ ಗಣೇಶ

1 min
459

ಭಾದ್ರಪದ ಮಾಸ ಬಂದಿತು

ಇಳೆಗೆ ಹರುಷವ ತಂದಿತು


ಮಾತೆ ಗೌರಿಯು ಭುವಿಗಿಳಿದಳು

ಜೊತೆಗೆ ಮಗನ ಕರೆತಂದಳು


ಭುವಿಯು ಸಂಭ್ರಮ ಪಟ್ಟಿತು

ಜನಪದವು ಹಿರಿಹಿರಿ ಹಿಗ್ಗಿತು


ರೋಗಿ ರುಜಿನಗಳ ಮರೆತರು

ಮಾತಾ ಸುತರ ಸ್ವಾಗತಿಸಿದರು


ಹಸಿರು ತೋರಣಗಳು ನಲಿದವು

ಹೂವು ಹಣ್ಗಳು ಮೆರೆದವು


ಮನೆ ಮನೆಯ ಮಂಟಪದೊಳು

ಮಂಡಿಸಿದರು ಸಂಭ್ರಮದೊಳು


ಮಾತಾಸುತರನು ಪೂಜಿಸಿದರು

ಭಕ್ಷ್ಯಭೋಜ್ಯಗಳನರ್ಪಿಸಿದರು


ಶ್ರೀ ಸ್ವರ್ಣ ಗೌರೀ ಗಣನಾಥನ 

ಭಕುತಿಯೊಳು ನಡೆಯಿಸಿ ಪೂಜನ


ಮಾತಾ ಸುತರ ಪೂಜೆ ಮುಗಿಸುತ

ಹಲವು ವಿಧಗಳ ವರವ ಬೇಡುತ


ಬೀಳ್ಕೊಟ್ಟರು ಗೌರೀ ಗಣೇಶರ

ಬಾಗಿನ ತಾಂಬೂಲಗಳ ನೀಡುತಾ


ತವರು ಮನೆಯ ಮಡಿಲಕ್ಕಿ ಹಿಡಿದು 

ಹೊರಟಳು ಹಿಮಗಿರಿಗೆ ಮಗನ ಕೈ ಪಿಡಿದು 


ಮತ್ತೆ ಬಾ ತಾಯಿ ಮಗನೊಡನೆ

ಕಾಯುತಿಹುದು ತವರು ನಿನಗಾಗಿ



Rate this content
Log in

Similar kannada poem from Abstract