ದಸರಾ
ದಸರಾ
ಬಹುದಿನದ ಕನಸೊಂದು ಮಸ್ತಕದಲ್ಲಿ ಕೊರೆಯುತ್ತಿತ್ತು
ಹವಣಿಕೆಯಲಿ ಪ್ರತಿ ವರ್ಷ ನಿರಾಸೆಯ ತೂರಿ ಹೋಗುತ್ತಿತ್ತು!
ಅದು ಇದು ಕೆಲಸಗಳ ನಡುವೆ ಆಸೆ ನಿರಾಸೆಯಾಗುತ್ತಿತ್ತು
ಜಂಜಾಟದ ಬಾಳಲಿ ಸದಾ ಅನುಸಂಧಾನ ತಪ್ಪದಾಗುತ್ತಿತ್ತು!
ಜಗವೆಲ್ಲ ಮೆಚ್ಚುವ ಮೈಪುಳಕಗೊಳಿಸುವ ಮಾತು ಕೇಳಿತ್ತು
ಮೈಸೂರ ವರ್ಣನೆ ಕೇಳಿದಷ್ಟು ಇಂಪಾಗಿ ಹುರುಪಾಗುತ್ತಿತ್ತು!
ಜೀವಿತದಲ್ಲೊಮ್ಮೆ ನವರಾತ್ರಿ ದಿನಗಳಲಿ ಆದ ನೋಡಬೇಕಿತ್ತು,
ಚಿನ್ನದ ಅಂಬಾರಿಯ ನಾಡದೇವಿಯನು ಕಣ್ತುಂಬಿ ಕೊಳ್ಳುವುದಿತ್ತು!
ಅಂತೂ ಇಂತೂ ಈ ಬಾರಿ ನಮ್ಮ ಸವಾರಿಯೂ ಹೊರಟಾಗಿತ್ತು
ತಾಯಿ ದರ್ಶನ ಅರಮನೆ ಪ್ರದರ್ಶನ ಎಲ್ಲಕಂಡು ಮುದವಾಗಿತ್ತು!
ಜನ ಜಾತ್ರೆಯಲ್ಲಿ ಮಿಂದು ಹೊಸತನದ ಹುರುಪು ಬಂದಿತ್ತು
ಝಗಮಗಿಸೋ ದೀಪಗಳ ಬೆಳಕಿನಲಿ ಕಣ್ಣು ಕೋರೈಸುತ್ತಿತ್ತು !
ಕಂಡದ್ದು ಬೇಕಾದ್ದು ಕೊಂಡು ಸಂತಸವು ಇಮ್ಮಡಿಸಿತ್ತು
ಜಂಬೂ ಸವಾರಿಯ ಸ್ತಬ್ಧ ಚಿತ್ರಗಳು ಕಣ್ಮನಗಳ ತಣಿಸಿತ್ತು!
ಹೀಗೆ ದಸರಗೆಂದು ಬಂದ ಮನವು ಅರಳಿ ಹೂವಾಯ್ತು
ಸ್ವರ್ಗದಲ್ಲಿ ತೇಲಿ ಬಂದಂತೆ ಜೀವನೋತ್ಸಾಹ ಮೈದುಂಬಿ ಬಂದಿತ್ತು!
