STORYMIRROR

Ranjitha Ranju

Action Fantasy Inspirational

3  

Ranjitha Ranju

Action Fantasy Inspirational

ದಮನಿತ ದನಿ

ದಮನಿತ ದನಿ

1 min
192

ಹತ್ತಿಕ್ಕುವಿರೇಕೆ ಬಣ್ಣವ ನಿಮ್ಮ

ಕಣ್ಣ ಗುಡ್ಡೆ ಕೀಳಿರಿ

ಮೊಲೆ ತೊಟ್ಟ ಕತ್ತರಿಸಿ

ಹುಬ್ಬ ಉಜ್ಜಿ ತೋರಿಸಿ

ಒಪ್ಪುವೆ ನಾ ನಿಮ್ಮ ದ್ವೇಷವ

ಕಳ್ಳರುಜುಗಾರರೆ ಕೆಣಕದಿರಿ

ಕೆಟ್ಟು ಕೆಡ್ಡ ತೋಡಿ ಬಿಡುವೆವು!


ಕೇಳಲಿಲ್ಲ ನಿಮ್ಮ ಸೂರು

ಉಡಲಿಲ್ಲ ನಿಮ್ಮ ಬಟ್ಟೆ

ಉಣಲಿಲ್ಲ ನಿಮ್ಮ ಊಟ

ಕಸಿದಿಲ್ಲ ನಿಮ್ಮ ಕವಡೆಕಾಸು

ಅಸಹ್ಯದ ನೋಟಬೀರದಿರಿ

ಸಹ್ಯ ಮೀರಿ ಸಮಾಧಿ ಕಟ್ಟುವೆವು!


ಚಮ್ಮಾರ ಬೇಕು ಬಳುಕುವ ನಡಿಗೆಗೆ

ಬಡಗಿ ಬೇಕು ಆಡಂಬರ ಬದುಕಿಗೆ

ದರ್ಜಿ ಬೇಕು ದರ್ಜೆಯ ಹೆಚ್ಚಳಕೆ

ಕ್ಷೌರಿಕ ಬೇಕು ಶೋಕಿಯ ವರ್ತನೆಗೆ

ತುಚ್ಛರಂತೆ ಕಂಡು ಸರಿಯದಿರಿ

ತುಣಿದು ಪಾತಾಳಕ್ಕೆ ತಳ್ಳುವೆವು!


ಹೇಸಿಗೆಯೊಳ ಬದುಕುವ

ನಿಮ್ಮ ಹೊಲಸ ಎತ್ತೋರು ನಾವು

ಕಸದ ರಾಶಿಯೊಳು ಒದ್ದಾಡುವ

ನಿಮ್ಮ ಕೊಳೆಯ ತೆಗೆಯೋರು ನಾವು

ನಿಮ್ಮ ಮಾಸಿದ ಬದುಕ 

ಮಡಿಗೊಳಿಸೋದು ನಾವು

ವರ್ಣ ನೋಡಿ ವರ್ತಿಸದಿರಿ

ವರ್ಗವನ್ನೆ ನಿರ್ನಾಮಗೊಳಿಸುವೆವು

ಎಚ್ಚರದಿಂದಿರಿ ಎಚ್ಚೆತ್ತುಕೊಂಡಿರಿ!



Rate this content
Log in

Similar kannada poem from Action