STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ದಿವ್ಯ ಚಿತ್ತಾರ

ದಿವ್ಯ ಚಿತ್ತಾರ

1 min
6

ದೇವ ಭೂಮಿಯ
ದೈವ ಚಿತ್ತಾರಗಳು 
ಯಾವ ಕುಂಚವೋ
ಯಾವ ಕಲಾವಿದ
ಬರೆದಿಹನೋ ಕಾಣೆ
ಮುಗಿಲು ಮುಟ್ಟಿಹ
ಹಿಮಗಿರಿಯ ಮಾಲೆ
ನೆತ್ತಿಯಲಿ ಮೇಲೆ 
ಹೊಳೆವ ಬೆಳ್ಳಿ ಬೈತಲೆ
ನಡು ನಡುವೆ 
ಸುಳಿ ಸುಳಿದು 
ಫಳಫಳನೆ ಹರಿದು
ಭುವಿಗೆ ಭರಭರನೆ
ಧುಮುಕುವ ಗಂಗೆ
ಹಸಿರು ವನಸಿರಿಯ
ಸುಂದರ ಸೊಬಗು
ಇದೋ  ದೈವ ಶಿಲ್ಪಿ
ಕಡೆದ ದಿವ್ಯ ಚಿತ್ತಾರ 

ವಿಜಯ ಭಾರತೀ.ಎ.ಎಸ್.






Rate this content
Log in

Similar kannada poem from Abstract