ಚಂದಮಾಮ
ಚಂದಮಾಮ
ತಿಂಗಳನ ಅಂಗಳದ ವಿಸ್ಮಯದ ನೆನಪಿಗಾಗಿ ಈ ಕವನ
ನಿಶೆಯ ಬೆಳಕು
ಕವಿ ಜನಗಳ
ಕಾವ್ಯೋಪಮೆ
ಸುರ ಸುಂದರ
ಚಕೋರ ಚಂದಿರ
ರೋಹಿಣೀ ಪ್ರಿಯ
ಪ್ರೇಮ ಸಾಗರದ
ಅನಭಿಷಿಕ್ತ ದೊರೆ
ಜ್ಯೋತಿಶ್ಶಾಸ್ತ್ರದ
ಮನಃ ಕಾರಕ
ಚಂಚಲ ಚಕೋರ
ಮಕ್ಕಳೊಲುಮೆಯ
ಚಂದಮಾಮ
ಚಕ್ಕುಲಿಮಾಮ
ಇದೀಗ ವಿಜ್ಞಾನದ
ಪರಮಾದ್ಭುತ
ನಿನ್ನ ಅಂಗಳದಲ್ಲಿ
ನಿನ್ನ ಅನುಪಮ
ಸೌಂದರ್ಯವನು
ಪ್ರತ್ಯಕ್ಷ ವೀಕ್ಷಿಸಲು
ತಳವೂರಿಯೇ ಬಿಟ್ಟ
ಇಸ್ರೋದ ವಿಕ್ರಂ
ವಿಜ್ಞಾನದ ಪ್ರಜ್ಞಾನ್
ನಿನ್ನ ಚುಂಬನಕ್ಕೆ
ನಾಚಿ ಹಿಗ್ಗಿದ್ದಾನೆ
ನಿನ್ನ ಅಂಗಳಕ್ಕೆ
ಹಾರಿ ಬರಲು
ಕಾದು ಕುಳಿತಿಹರು
ಇಳೆಯ ಮಂದಿ
ಚಂದ್ರ ಯಾನಕೆ
