ಚಿಣ್ಣರ ಕನಸು
ಚಿಣ್ಣರ ಕನಸು
ಬಣ್ಣದ ಲೋಕವು ಕರೆಯುತಿದೆ
ಚಿಣ್ಙರ ಮನಸನು ಸೆಳೆಯುತಿದೆ
ಬಣ್ಣದ ಬೆಡಗಿಗೆ ಬೆರಗಾಗುತಲಿ
ಕಣ್ಣನು ಅರಳಿಸಿ ನೋಡುತಲಿ
ಮನೆಯನು ತೊರೆದು ಹೊರಟರು
ಕನಸಿನ ಬೆನ್ನತ್ತಿ ಓಡಿದರು
ಧನವನು ಗಳಿಸುವ ಆಸೆಯಲಿ
ಬಾನೊಳು ಹಾರುವ ಖಾತರದಿ
ತುಳಿದರು ಬಣ್ಣದ ಲೋಕವನು
ಬಳಿದರು ಮುಖಕೆ ಬಣ್ಣವನು
ಕುಳಿತರು ಕಾಯುತ ಪಾತ್ರವನು
ಕಳೆದವು ವರ್ಷಗಳು ನಿರಾಸೆಯಲಿ
ಕನಸಿನ ಪಾತ್ರವು ಸಿಗಲಿಲ್ಲ
ಮನಸಿಗೆ ನೋವು ತಪ್ಪಲಿಲ್ಲ
ಕನಸಿನ ಆ ಬಣ್ಣದ ಲೋಕವು
ನನಸಲಿ ಅದು ಭ್ರಮಾಲೋಕ
ಬಣ್ಣದ ಲೋಕದ ಸತ್ಯವನು
ಚಿಣ್ಣರು ಅರಿತರು ನಿಜದಲ್ಲಿ
ಕಣ್ಣೊಳು ನಿರಾಸೆ ಸೂಸುತ್ತಾ
ತಣ್ಣಗೆ ಬಂದರು ಮನೆಯತ್ತ
