ಭಯಾನಕ
ಭಯಾನಕ
ಕರಾಳದ ಕತ್ತಲು ಆವರಿಸಿತು ಸುತ್ತಲೂ
ಹತ್ತಲು ನೋಡಿದೆ ಬಿಳಿ ಬಣ್ಣದ ಮೆಟ್ಟಿಲು
ಕಾಲಿಟ್ಟರೆ ಮಾಯವಾಯಿತು
ಆಶ್ಚರ್ಯದಿಂದ ಕುಳಿತೆ ಒಳಗೆ ದಿಗಿಲು.
ದಿವಾನ್ ಮೇಲೆ ಕುಳಿತೆ ತಲೆಯಲ್ಲಿ ಕುಂತಿತು ಚಿಂತೆಯ ಕಂತೆ,
ಮೆಲ್ಲನೆ ಒಳಗಡೆ ಕೋಣೆಯಲ್ಲಿ ನಿಂತೆ ,
ಹಿಂದೆ ನೋಡಿದರೆ ಇತ್ತು ಒಂದು ನೀಲಿ ಬಣ್ಣದ; ಹಣತೆ
ಮುಟ್ಟಲು ಕಾಣದಂತಾಯಿತು ಬೇಸತ್ತೆ.
ಭಯದ ಭೀತಿಗೆ ಹೊದ್ದು ಮಲಗಿದೆ,
ಹೊದ್ದಿರುವ ಚಾದರ್ ಯಾರೋ ಎಳೆದಂತಾಗಿದೆ
ತೆಗೆದು ನೋಡಲು ಬೆದರಿಕೆಯಿಂದ ಕೂಡಿದೆ,
ಧ್ಯೆರ್ಯ ತೆಗೆದುಕೊಂಡು ಕೊನೆಗೆ ಎದ್ದು ಕೂತಾಗಿದೆ;
ಮುಂದೆ ಇತ್ತು ಒಂದು ಕಲ್ಪನೆಗೆ ಮೀರಿರುವ
ಭೂತ ನಿಂತಾಗಿದೆ.

