STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

2  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

ಭೂತಾಯಿ ಚೊಚ್ಚಲ ಮಗ

ಭೂತಾಯಿ ಚೊಚ್ಚಲ ಮಗ

1 min
196

ನೇಸರದಿ ರವಿ ಮೂಡಿ ಬರತ

ಹೋರಡುವ ಕೆಲಸಕೆ ರೈತನಿತ

ಬೇಸರಿಸದೆ ನಗು ಮೊಗದ ಯೋಗಿ

ನಿಷ್ಕಲ್ಮಷದವನೇ ನಮ್ಮ ಅನ್ನದಾತ

ಭೂತಾಯಿಯ ಚೊಚ್ಚಲ ಮಗನಿತ

ಜೀವದ ಉಸಿರಿಗೆ ಪ್ರಾಣದಾತ

ಕೋಟಿ ಆಸ್ತಿ ಪ್ರಯೋಜನವಿಲ್ಲ

ಕಷ್ಟಪಡುವವನೇ ನಮ್ಮ ಅನ್ನದಾತ

ಹಗಲಿರುಳು ದುಡಿಯುವ ನೋಡಿ

ಮಣ್ಣಿನ ಜೊತೆ ಒಂದುಗೂಡಿ

ನೆಲ ಹದವ ಮಾಡಿ ಉತುಬಿತ್ತುವ

ಮಣ್ಣಿನ ಮಗನೇ ನಮ್ಮ ಅನ್ನದಾತ

ಎತ್ತುಗಳೇ ಇವನ ಸ್ನೇಹಿತರು

ಸಲಕರಣಗಳೇ ಆಯುಧಗಳು

ನಿತ್ಯದಲಿ ಹೋರಾಟ ಸೃಷ್ಟಿಯಲಿ

ಹೋರಾಟಗಾರನೇ ನಮ್ಮ ಅನ್ನದಾತ

ದೇಶದ ಬೆನ್ನೆಲಬು ಅನ್ನುವರು

ಮೋಸಕೆ ಒಳಪಡುವನಿವನು

ಬೆಳೆದ ಬೆಳೆಗೆ ಬೆಲೆಯಿಲ್ಲ

ಬಲಿಯಾಗುವನೇ ನಮ್ಮ ಅನ್ನದಾತ

ಹೊಗಳಿ ಹಾಡಿದರೆ ಪರಿಹಾರವಲ್ಲ

ಅವನ ಕಷ್ಟಗಳಿಗೆ ಸ್ಪಂದಿಸಿರಿ ಎಲ್ಲಾ

ನೇಣಿಗೆ ಹೋಗದಿರಿ ರೈತಭಾಂಧವರೆ

ನನ್ನ ವಿನಂತಿ ನಿಮಗೆ  ಅನ್ನದಾತರೇ

ಸಮಸ್ಯೆಗೆ ನೂರೆಂಟು ಮಾರ್ಗವುಂಟು

ಕೇಳಿ ತಿಳಿಯಿರಿ ಬಾಳು ಹೊನಲುಂಟು

ನೀವೇ ದೇಶದ ಆಧಾರ ಸ್ತಂಭವುಂಟು

ಪ್ರಿಯ ರೈತರೇ ಕೇಳಿ ಅನ್ನದಾತರೇ


Rate this content
Log in

Similar kannada poem from Inspirational