ಭಾರತಾಂಬೆ
ಭಾರತಾಂಬೆ
ಓ ಭಾರತಾಂಬೆ
ಸ್ವಾತಂತ್ರ್ಯ ಲಭಿಸಿತು
ಸರಪಳಿ ಕಳಚಿತು
ವಿಜಯದ ಹೊನ್ನ
ಕಳಶ ಮುಡಿಸೇರಿತು
ತ್ರಿವರ್ಣ ಧ್ವಜ ಹಾರಿತು
ವಂದೇ ಮಾತರಂ
ಘೋಷಣೆಯ ಕೂಗು
ಮುಗಿಲು ಮುಟ್ಟಿತು
ದಶಕಗಳೇಳು ಮುಗಿದು
ಮತ್ತೈದು ಕಳೆದು ಹೋಗಿ
ಗತವೈಭವದ ಗಾನ
ಎಲ್ಲೆಲ್ಲೂ ಮೊಳಗಿ
ಜನಮನಗಳ ಸೇರಿತು
ಸ್ಥಿತ ವೈಭವದ ಸ್ಥಿತಿ
ಸೊರಗಿ ಒಣಗಿತು
ಹುತಾತ್ಮರೆಲ್ಲರೂ
ಇತಿಹಾಸ ಸೇರಿದರು
ಮಹಾತ್ಮರ ನಡೆನುಡಿ
ಮಾಸಲಾಗಿ ಹೋಯಿತು
ಸರ್ವ ಹೃದಯ ಸಂಸ್ಕಾರಿ
ಹೇ ಭಾರತಾಂಬೆ ನಿನ್ನ
ಸನಾತನ ಸಂಸ್ಕಾರಗಳು
ಭೂಗರ್ಭವನು ಸೇರಿ
ಪಳೆಯುಳಿಕೆಗಳಾದವು
ಅವುಗಳ ಶೋಧನೆಗೆ
ಬೇಕು ಯುವ ಚೇತನಗಳು
ಬೆಳೆಸಬೇಕು ಉಳಿಸಬೇಕು
ನಿನ್ನ ಭವ್ಯ ಸಂಸ್ಕೃತಿಯನು
ಹರಡಬೇಕು ವಿಶ್ವದೆಲ್ಲೆಡೆ
ಬೆಳಗಬೇಕು ನಿನ್ನ ಬೆಳಕು
ಸರ್ವರಾ ಹೃದಯದಲಿ
ಅದನುಳಿಸಿ ಬೆಳೆಸಲು
ಬೇಕು ನಿಮಗೆ ನಿನ್ನ ಹರಕೆ
ಶಕ್ತಿ ನೀಡಿ ಹರಸು ಮಾತೆ
ಓ ನನ್ನ ಭಾರತಾಂಬೆ
