ಬೆಳಕಿನ ಹಬ್ಬ
ಬೆಳಕಿನ ಹಬ್ಬ
ಬಡತನ ನೀಗಿಸಿ ಸಿರಿತನ ತರುವ ನಂದಾದೀಪ
ಕತ್ತಲು ಓಡಿಸಿ ಬೆಳಕ ಚೆಲ್ಲುವ ಕಾಂತಿ ದೀಪ
ದೀಪ ಬೆಳಗಿದಂತೆ ಮನೆ ಮನವೂ ಬೆಳಗಲಿ
ಬಂದ ಕಷ್ಟ ದಾರಿದ್ರ್ಯ ಬಹುಬೇಗ ತೊಲಗಲಿ
ಹಣತೆ ತಾನುರಿದು ಬೆಳಕ ಚೆಲ್ಲುತ್ತಾ
ತೈಲದಿ ಮಿಂದು ಎಲ್ಲೆಡೆ ಕಾಂತಿ ಹರಡುತ್ತಾ
ಪ್ರೀತಿಯೆಂಬ ಹಣತೆಗೆ ತಿಲಕ ಇಟ್ಟಂತೆ ಕಾಣುವೆ
ಚಂದದಿ ಹೊಳೆಯುವ ಪ್ರಣತೆ ನೀನೆಷ್ಟು ಅಂದದಿ ಬೆಳಗುವೆ
ಬೆಳಗುವ ದೀಪದಂತೆ ಪ್ರಜ್ವಲಿಸಲಿ ಸಕಲರ ಬಾಳು
ದೀಪದ ಕಾಂತಿಗೆ ಹೊತ್ತಿ ಉರಿಯಲಿ ನಮ್ಮೊಳಗಿನ ಮೇಲು-ಕೀಳು
ಹಚ್ಚಿದ ದೀಪ ಆರದಂತೆ ನೋಡಿಕೋ ಗೆಳೆಯ
ನಿನ್ನ ಜೀವನ ಸದಾ ಉರಿಯುವ ದೀಪದಂತಾಗಲಯ್ಯಾ
ಬೆಳಗು ನಿನಗಿಲ್ಲ ಅಹಂಕಾರದ ಅಂದಕಾರ
ನಡೆಯಲಿ ಎಲ್ಲೆಡೆ ಅನಾಚಾರದ ಸಂಹಾರ
ವೃದ್ಧಿಸಲಿ ʼನಿನ್ನʼ ದಯೆಯಿಂದ ಸುಖ ಸಮೃದ್ಧಿಯ ಸಾಗರ
ಈ ಬೆಳಕಿನ ಹಬ್ಬ ಎಲ್ಲರಿಗೂ ಆಗಲಿ ಸೌಭಾಗ್ಯದ ಆಗರ
