STORYMIRROR

Vaishnavi S Rao

Inspirational Others Children

4  

Vaishnavi S Rao

Inspirational Others Children

ಹಬ್ಬ ಬಂದಿದೆ

ಹಬ್ಬ ಬಂದಿದೆ

1 min
270

ಹೋಳಿ ಹಬ್ಬವು ಬಂದಿತ್ತು 

ಉತ್ತರ ಭಾರತ ಸಡಗರವಿತ್ತು 

ಕಾಮನ ದಹನವಾಗಿತ್ತು

ಅಮೂಲ್ಯ ಸಂದೇಶ ಸಾರಿತ್ತು


ಚಪ್ಪರವನ್ನು ಕಟ್ಟಿ ಇಡುತ್ತಾರೆ

ಹಿಂದೂ ಧರ್ಮದಿ ಪೂಜಿಸುತ್ತಾರೆ

ಹಬ್ಬದ ಸಡಗರ ಆಚರಿಸುತ್ತಾರೆ

ವಿಶೇಷ ಸಂತೋಷ ಸಾರುತ್ತಾರೆ


ಆಕಾಶ ಬುಟ್ಟಿಗಳ ಇಡುತ್ತಾರೆ

ಪೂತನಿ ಸಂಹಾರ ಮಾಡುತ್ತಾರೆ

ಧಾರ್ಮಿಕ ವಿಧಿಗಳ ನಡೆಸುತ್ತಾರೆ

ಬಾಳುವ ಸಂದೇಶ ಸಾರುತ್ತಾರೆ


ದ್ವೇಷಗಳನ್ನು ಮರೆಯುತ್ತಾರೆ

ಬಣ್ಣಗಳನ್ನು ಹಾಕಿಕೊಳ್ಳುತ್ತಾರೆ

ಹನುಮಂತನ ಪೂಜಿಸುತ್ತಾರೆ

ವಿಶೇಷ ಅಲಂಕಾರ ಮಾಡುತ್ತಾರೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational